ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು

ಕಲಬುರಗಿ: ಬಾಯಿಂದ ಆಹಾರವನ್ನು ಕಸಿದ ಹಿನ್ನೆಲೆಯಲ್ಲಿ ಹಾವೊಂದು ಅಲ್ಲಿರುವ ಸ್ಥಳೀಯರನ್ನು ಬೆನ್ನತ್ತಿದ ಅಪರೂಪದ ಘಟನೆಯೊಂದು ನಡೆದಿದೆ.

ಜಿಲ್ಲೆಯ ಸೇಡಂ ತಾಲೂಕಿನ ಸಮಖೇಡ ತಾಂಡಾ ಬಳಿ ಹಾವು ಸಾರ್ವಜನಿಕರನ್ನು ಬೆನ್ನಟ್ಟಿದೆ. ಮೇಯಲು ಹೋದ ಕುರಿಯನ್ನು ಹಾವೊಂದು ನುಂಗಲು ಯತ್ನಿಸಿದೆ. ಇದನ್ನು ಕಂಡ ಸ್ಥಳೀಯರು ಹಾವಿನ ಬಾಯಿಂದ ಕುರಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿಯೇ ಕುರಿ ಮೃತಪಟ್ಟಿದೆ.

ಇದನ್ನೂ ಓದಿ: ಹಸಿವು ನೀಗಿಸಿಕೊಳ್ಳಲು ನಾಯಿಮರಿಯನ್ನೇ ನುಂಗಲು ಯತ್ನಿಸಿದ ನಾಗರಹಾವು 

ತನ್ನ ಬಾಯಿಗೆ ಬಂದ ಆಹಾರ ಕಸಿದ ಜನರನ್ನು ಕಂಡ ಹಾವು ರೋಷದಿಂದ ಬಾಯ್ತೆರೆದು ಬೆನ್ನು ಹತ್ತಿದೆ. ಕೂಡಲೇ ಹಾವಿನ ದ್ವೇಷ ಕಂಡ ಸ್ಥಳೀಯರು ಸ್ಥಳದಿಂದ ದಿಕ್ಕು ತಪ್ಪಿ ಓಡಿ ಹೋಗಿದ್ದಾರೆ.

ಇದನ್ನೂ ಓದಿ: ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆಯಾಗ್ತಿರೋದನ್ನ ಕಂಡು ಮಾಲೀಕನೇ ದಂಗಾದ!

ಇದೇ ವರ್ಷ ಫೆಬ್ರುವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ರಸ್ತೆಯ ಶನೀಶ್ವರ ದೇವಸ್ಥಾನದ ಬಳಿ ನಾಗರಹಾವೊಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ನಾಯಿಮರಿಯನ್ನು ನುಂಗಲು ವ್ಯರ್ಥ ಪ್ರಯತ್ನಪಟ್ಟಿತ್ತು. ಆದರೆ ನಾಯಿಮರಿಯು ಗಾತ್ರದಲ್ಲಿ ಹಾವಿನ ಬಾಯಿಗಿಂತ ದೊಡ್ಡದಾಗಿತ್ತು. ಹಾಗಾಗಿ ನಾಯಿಮರಿಯನ್ನು ನುಂಗಲು ಸಾಧ್ಯವಾಗಿರಲಿಲ್ಲ. ಈ ದೃಶ್ಯಾವಳಿಗಳು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದ್ದಿದ್ರು.

ಇದನ್ನೂ ಓದಿ: ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ

https://www.youtube.com/watch?v=_AEInlLP15Q

https://www.youtube.com/watch?v=5vi5ECBTGl4

 

Comments

Leave a Reply

Your email address will not be published. Required fields are marked *