ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

ನೆಯಲ್ಲಿ ಇಲಿ ಕಾಣಿಸಿಕೊಂಡರೆ ಅದನ್ನ ಹಿಡಿಯಲು ಪ್ರಯತ್ನಿಸಬಹುದು ಅಥವಾ ಅದಾಗಿಯೇ ಹೋಗುತ್ತೆ ಅಂತ ಸುಮ್ಮನಾಗಬಹುದು. ಒಂದು ವೇಳೆ ಹಾವು ಕಾಣಿಸಿಕೊಂಡರೆ ಅದನ್ನ ಹಿಡಿಸೋವರೆಗೂ ಸಮಾಧಾನವಿರಲ್ಲ. ಇನ್ನು ಇಲಿ, ಹಾವು ಎರಡೂ ಒಟ್ಟಿಗೆ ಕಾಣಿಸಿಕೊಂಡ್ರೆ? ಗಾಬರಿಯಾಗಿ ಅಲ್ಲಿಂದ ದೂರ ಹೋಗ್ತೀವಿ. ಆದ್ರೆ ಇಲ್ಲೊಬ್ಬ ತನ್ನ ಮೊಬೈಲ್ ತೆಗೆದು ಅದನ್ನ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗಿದೆ.

ಬಾಯಲ್ಲಿ ಇಲಿಯನ್ನ ಕಚ್ಚಿಕೊಂಡಿದ್ದ ಹಾವು ಎಸಿ ಯಿಂದ ಕೆಳಗೆ ನೇತಾಡುತ್ತಿರೋದನ್ನ ವಿಡಿಯೋದಲ್ಲಿ ನೋಡಬಹುದು. ಇಲಿಯನ್ನ ಹಿಡಿದು ಹಾವು ಎಸಿಯೊಳಗೆ ಮತ್ತೆ ನುಸುಳಿಕೊಳ್ಳೋಕೆ ಪ್ರಯತ್ನಿಸುತ್ತಿದೆ. ಹಾವಿನ ಬಾಯಲ್ಲಿರುವ ಇಲಿ ಕೂಡ ದೊಡ್ಡದಾಗಿದ್ದು ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ.

ಕೇವಲ 10 ಸೆಕೆಂಡ್‍ಗಳ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, 6.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 65 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದ್ದು, 44 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದೆ.

ನಿರೀಕ್ಷೆಯಂತೆ ಫೇಸ್‍ಬುಕ್‍ನಲ್ಲಿ ನೋಡುಗರು ಈ ವಿಡಿಯೋ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. “ಇದನ್ನ ನೋಡಿ ನನಗೆ ನಿಜ್ಕಕೂ ಗಾಬರಿಯಾಯ್ತು” ಎಂಬ ಒಬ್ಬರು ಕಮೆಂಟ್ ಮಾಡಿದ್ದಾರೆ. “ನಾನು ಕಳೆದ ರಾತ್ರಿ ಈ ವಿಡಿಯೋ ನೋಡಿದೆ. ನಿಜವಾಗ್ಲೂ ಹಾಸಿಗೆಯಿಂದ ಎಗರಿ ಎಸಿ ಕೆಳಗೆ ಇಲ್ಲದಂತೆ ಮತ್ತೊಂದು ಬದಿಗೆ ಹೋಗಿ ಮಲಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

https://www.facebook.com/SimpleGirlOrg/videos/311834352571355/

Comments

Leave a Reply

Your email address will not be published. Required fields are marked *