ಬೆಂಗಳೂರು: ಮಡಿವಾಳ ಕೆರೆಯ ದಡಕ್ಕೆ ರಾಶಿ ರಾಶಿ ಶಂಖದ ಹುಳ, ಕಪ್ಪೆಚಿಪ್ಪು ಮೀನುಗಳು ಹರಿದುಬಂದಿದೆ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ಕೆರೆಯ ದಡದಲ್ಲಿಯೇ ಸತ್ತ ಕಪ್ಪೆ ಚಿಪ್ಪು ಮೀನುಗಳ ರಾಶಿಯೇ ಬಿದ್ದಿದೆ. ಕೆರೆಯ ದಡದಲ್ಲಿ ಬಿದ್ದ ರಾಶಿ ಮೀನು ಶಂಖದ ಹುಳ, ಕಪ್ಪೆ ಚಿಪ್ಪು ಮೀನುಗಳನ್ನು ನೋಡಿ ಸಾರ್ವಜನಿಕರು ಗಾಬರಿಯಾಗಿದ್ದಾರೆ.

ಕೆರೆ ಸಂಪೂರ್ಣ ಕಲುಷಿತಗೊಂಡಿದ್ದಕ್ಕೆ ಈ ಅನಾಹುತ ಸಂಭವಿಸಿದೆ. ಜಲಮಂಡಳಿಗೆ ಇಲ್ಲಿ ನೀರಿನ ಶುದ್ಧೀಕರಣ ಘಟಕ ಕಟ್ಟೋದಕ್ಕೆ ಸರ್ಕಾರದಿಂದ ದುಡ್ಡು ಬಿಡುಗಡೆಯಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದ ಕೆರೆಯಲ್ಲಿರುವ ಅಷ್ಟು ಜಲಚರಗಳು ಪ್ರಾಣ ಕಳೆದುಕೊಂಡು ದಡಕ್ಕೆ ಬಂದು ತೇಲುತ್ತಿದೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಬಿಎಂಪಿ ರಾಜಕಾಲುವೆಯ ನೀರನ್ನು ನೇರವಾಗಿ ಮಡಿವಾಳ ಕೆರೆಗೆ ಬಿಟ್ಟಿದೆ. ಇದರಿಂದಲೇ ಟನ್ ಗಟ್ಟಲೇ ಶೆಲ್ ಫಿಶ್, ಮೀನುಗಳು ಹಾಗೂ ಹಕ್ಕಿಗಳ ಮಾರಣ ಹೋಮ ನಡೆದಿದೆ. ರಾಜಕಾಲುವೆಯ ಮೇಲೆ ರಸ್ತೆ ನಿರ್ಮಾಣ ಮಾಡಿ ಆ ನೀರನ್ನು ಬಿಬಿಎಂಪಿ ಕೆರೆಗೆ ತಿರುಗಿಸಿದೆ. ಮೊದಲ ಹಂತದಲ್ಲಿಯೂ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ನೇರವಾಗಿ ಮಡಿವಾಳ ಕೆರೆಗೆ ಬಿಟ್ಟಿದ್ರಿಂದ ಕೆರೆ ಸಂಪೂರ್ಣ ಹಾಳಾಗಿದೆ. ಜೆಪಿನಗರ, ಜಯನಗರ, ಬಿಟಿಎಂ ಲೇಔಟ್ ನ ತ್ಯಾಜ್ಯ ನೀರು ನೇರ ಕೆರೆಗೆ ಬಿಟ್ಟುಬಿಡುತ್ತಿದೆ. ಈ ಕೆರೆಯಲ್ಲಿ ಬೋಟಿಂಗ್ ಗೇ ಬೇರೆ ಅವಕಾಶ ಕಲ್ಪಿಸಿಕೊಡುತ್ತಿದೆ ಅಂತ ಸ್ಥಳೀಯರು ದೂರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=rRYhngT1sak

Leave a Reply