ಬಿಎಸ್‍ಎಫ್ ಯೋಧರ ಮೇಲೆ ದಾಳಿ – ಓರ್ವ ಸ್ಮಗ್ಲರ್‌ನ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿಯು ನಡೆಸಿದ ಎನ್‍ಕೌಂಟರ್‌ನಲ್ಲಿ ಕಳ್ಳಸಾಗಣೆದಾರನೊಬ್ಬನನ್ನು ಹತ್ಯೆಗೈಯಲಾಗಿದೆ.

ಮೃತ ಕಳ್ಳಸಾಗಾಣಿಕೆದಾರನನ್ನು ಮುರ್ಷಿದಾಬಾದ್ ನಿವಾಸಿ ಭಾರತೀಯ ಪ್ರಜೆ ರೋಹಿಲ್ ಮಂಡಲ್ ಎಂದು ಗುರುತಿಸಲಾಗಿದೆ. ಈ ಕುರಿತು ಬಿಎಸ್‍ಎಫ್ ಅಧಿಕಾರಿಯೊಬ್ಬರು ಮಾತನಾಡಿ, ಕಳ್ಳಸಾಗಣೆದಾರರ ಗುಂಪೋಂದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಪ್ರತೀಕಾರವಾಗಿ ಪಡೆಗಳು ಓರ್ವ ಕಳ್ಳಸಾಗಣೆದಾರನೊಬ್ಬನನ್ನು ಹತ್ಯೆಗೈದಿದ್ದಾರೆ. 141 ಬೆಟಾಲಿಯನ್‍ನ ಬಾರ್ಡರ್ ಔಟ್ ಪೋಸ್ಟ್ ಸಾಗರಪಾರಾ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಬಿಎಸ್‍ಎಫ್‍ನ ಗುಪ್ತಚರ ಇಲಾಖೆಯಿಂದ ವಿಶ್ವಾಸಾರ್ಹ ಮಾಹಿತಿ ಪಡೆದ ನಂತರ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಅಲರ್ಟ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಪ್ರದೇಶದಲ್ಲಿ 10-15 ಕಳ್ಳಸಾಗಾಣಿಕೆದಾರರ ಚಲನವಲನವನ್ನು ಗಮನಿಸಿದ ಪಡೆಗಳು ಗಸ್ತು ತಿರುಗುತ್ತಿದ್ದವರಿಗೆ ಮಾಹಿತಿ ನೀಡಿವೆ. ಸ್ವಲ್ಪ ಸಮಯದ ನಂತರ, ಕಳ್ಳಸಾಗಣೆದಾರರು ಕಲ್ಲುಗಳು ಮತ್ತು ಚೂಪಾದ ಆಯುಧಗಳನ್ನು ಬಳಸಿ ಜವಾನರ ಮೇಲೆ ದಾಳಿ ಮಾಡಿದರು. ಬಳಿಕ ಯೋಧರೂ ಪ್ರತಿದಾಳಿ ಆರಂಭಿಸಿದ್ದಾರೆ. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

ಬಿಎಸ್‍ಎಫ್ ಸಿಬ್ಬಂದಿ ಮೊದಲು ಕಳ್ಳಸಾಗಣೆದಾರರನ್ನು ಓಡಿಸಲು ಪ್ರಯತ್ನಿಸಿದರು. ಬಳಿಕ, ಆತ್ಮರಕ್ಷಣೆಗಾಗಿ ತಮ್ಮ ಕೈಯಲ್ಲಿದ್ದ ಆಯುಧವನ್ನು ಬಳಸಲು ಮುಂದಾಗಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತರ ಕಳ್ಳಸಾಗಣೆದಾರರು ಓಡಿಹೋಗಿದ್ದು, ಸ್ಥಳದಿಂದ 532 ಬಾಟಲ್ ಫೆನ್ಸೆಡಿಲ್ ಅನ್ನು ಯೋಧರು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *