ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ : ಭದ್ರತೆ ಹೆಚ್ಚಿಸಲು ನಿರ್ಧಾರ

ಪಂಜಾಬಿ ಗಾಯಕ ಸಿಧು ಹತ್ಯೆ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸಲು ಪೊಲೀಸ್ ಇಲಾಖೆ ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಗಾಯಕ ಸಿಧು ಹತ್ಯೆಗೆ ಕಾರಣರು ಎಂದು ಶಂಕಿಸಲಾದ ವ್ಯಕ್ತಿಗಳು, ಸಲ್ಮಾನ್ ಖಾನ್ ಅವರಿಗೆ ತೊಂದರೆ ಮಾಡಬಹುದು ಎನ್ನುವ ಕಾರಣಕ್ಕೆ ಇಂಥದ್ದೊಂದು ಕ್ರಮ ತಗೆದುಕೊಳ್ಳಲಾಗಿದೆಯಂತೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯಾದ ಕೆಲವೇ ಗಂಟೆಗಳಲ್ಲೇ ಅದರ ಹಿಂದೆ ಯಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಈ ಹತ್ಯೆಗೆ ಲಾರೆನ್ಸ್  ಬಿಷ್ಣೋಯ್ ಗ್ಯಾಂಗ್ ಕಾರಣವೆಂದು ಅನುಮಾನ ವ್ಯಕ್ತ ಪಡಿಸಲಾಗುತ್ತಿದೆ. ಬಿಷ್ಣೋಯ್ ಸದ್ಯ ತಿಹಾರ್ ಜೈಲಿನಲ್ಲಿದ್ದರೂ, ಅಲ್ಲಿಂದಲೇ ಸಿಧು ಅವರನ್ನು ಕೊಲ್ಲಿಸಲಾಗಿದೆ ಎನ್ನುವ ಆಪಾದನೆ ಬೇರೆ ಇದೆ. ಇವನ ಗ್ಯಾಂಗ್ ಗೂ ಸಲ್ಮಾನ್ ಖಾನ್ ನಂಟು ಇರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲು ಚಿಂತಿಸಲಾಗಿದೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

ಸಲ್ಮಾನ್ ಖಾನ್ ಈ ಹಿಂದೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕೃಷ್ಣಮೃಗವನ್ನು ಪವಿತ್ರ ಜೀವಿ ಎಂದು ಪರಿಗಣಿಸಿರುವ ಬಿಷ್ಣೋಯ್ ಸಮುದಾಯಕ್ಕೆ ಸೇರಿರುವ ಲಾರೆನ್ಸ್ ಬಿಷ್ಣೋಯ್ ಈ ಹಿಂದೆಯೇ ಸಲ್ಮಾನ್ ಖಾನ್ ಅವರನ್ನು ಜೋಧ್ ಪುರ ನ್ಯಾಯಾಲಯದ ಹೊರಗೆ ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಕಾರಣದಿಂದಾಗಿ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆಯಂತೆ.

ಸಿಧು ಹತ್ಯೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಲಾರೆನ್ಸ್ ಹೇಳಿಕೊಂಡಿದ್ದರೂ, ಈ ಕೃತ್ಯದ ಹಿಂದೆ ಲಾರೆನ್ಸ್ ಟೀಮ್ ಇದೆ ಎಂದು ಶಂಕಿಸಲಾಗಿದೆ. ಹೀಗಾಗಿ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಈಗಾಗಲೇ ಹೆಚ್ಚಿನ ಭದ್ರತೆಯನ್ನೂ ನೀಡಲಾಗಿದೆ.

Comments

Leave a Reply

Your email address will not be published. Required fields are marked *