ವಾಷಿಂಗ್ಟನ್: ಭಾನುವಾರ ಅಮೆರಿಕದ ಹೂಸ್ಟನ್‌ನಲ್ಲಿರುವ ಡೆಟ್ರಾಯಿಟ್ ನಗರದಲ್ಲಿ 2 ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮೊದಲ ಘಟನೆಯಲ್ಲಿ ಒಟ್ಟು ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ. ನಾಲ್ಕನೇ ವ್ಯಕ್ತಿ ಸದ್ಯ ಬದುಕುಳಿದಿದ್ದು, ಆತನಿಗೆ ತೀವ್ರವಾದ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಘಟನೆಯ ಬಳಿಕ ಡೆಟ್ರಾಯಿಟ್ ನಗರದಲ್ಲಿ ಪೊಲೀಸರು ನಾಲ್ವರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಶಂಕಿತ ವ್ಯಕ್ತಿಯನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ. ಶಂಕಿತ ವ್ಯಕ್ತಿಯ ಬಗ್ಗೆ ತಿಳಿದವರು ಮಾಹಿತಿ ನೀಡಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರೋಪಿ ಮತ್ತೆ ಗುಂಡಿನ ದಾಳಿ ನಡೆಸಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಆದಾಯಕ್ಕಾಗಿ ಕಮ್ಯುನಿಸ್ಟ್ ಸರ್ಕಾರ ಹಿಂದೂ ದೇಗುಲವನ್ನು ವಶಪಡಿಸಿಕೊಳ್ತಿದೆ: ಸುಪ್ರಿಂಕೋರ್ಟ್ ಮಾಜಿ ಜಡ್ಜ್ ವೀಡಿಯೋ ವೈರಲ್

ಇನ್ನೊಂದು ಘಟನೆಯಲ್ಲಿ ಬಂದೂಕುಧಾರಿಗಳು ಸ್ಥಳೀಯ ಮನೆಗಳಿಗೆ ಬೆಂಕಿ ಹಚ್ಚಿದ್ದು, ನಿವಾಸಿಗಳು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಗುಂಡು ಹಾರಿಸಿ ಮೂವರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ. ಬಳಿಕ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಈ ನಡುವೆ ರಾಜಧಾನಿ ವಾಷಿಂಗ್ಟನ್‌ನಲ್ಲೂ ಎನ್‌ಎಫ್‌ಎಲ್ ಫುಟ್‌ಬಾಲ್ ಆಟಗಾರನ ಮೇಲೆ ಗುಂಡು ಹಾರಿಸಿರುವುದಾಗಿ ವರದಿಗಳು ತಿಳಿಸಿವೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮಠದಲ್ಲಿಲ್ಲ ಮುರುಘಾ ಶ್ರೀಗಳು- ಮೌನಕ್ಕೆ ಜಾರಿದ ಭಕ್ತರು

Leave a Reply