ಮನೆಯ ಮೇಲ್ಛಾವಣಿ ಕುಸಿತ – ಒಂದೇ ಕುಟುಂಬದ ಆರು ಮಂದಿ ದುರ್ಮರಣ

ಬೀದರ್: ಹಳೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಆರು ಜನರು ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಖಿಲಾಗಲ್ಲಿಯಲ್ಲಿ ನಡೆದಿದೆ.

ಪತಿ ನದೀಮ್ ಶೇಕ್ (45), ಪತ್ನಿ ಫರೀದಾ ಬೆಗಂ(34) ಮಕ್ಕಳಾದ ಐಹಿಶಾ ಭಾನು (15), ಮೇಹೇತಾ (14), ಫಜಾನ್ ಅಲಿ (6) ಮತ್ತು ಫರಾನ್ ಅಲಿ (4) ಮೃತ ದುರ್ದೈವಿ ಕುಟುಂಬಸ್ಥರು. ಕಳೆದ ದಿನ ಬಸವಕಲ್ಯಾಣದಲ್ಲಿ ಸಿಎಂ ಗ್ರಾಮ ವಾಸ್ತವ್ಯಕ್ಕೆ ಬರುವ ಮುನ್ನ ಈ ಘಟನೆ ಸಂಭವಿಸಿದೆ.

ಮನೆಯಲ್ಲಿ ಎಲ್ಲರೂ ಒಟ್ಟಿಗೆ ಮಲಗಿದ್ದರು. ಈ ವೇಳೆ ಹಳೆ ಮನೆಯಾಗಿದ್ದರಿಂದ ತಡರಾತ್ರಿ ಮೇಲ್ಛಾವಣೆ ಏಕಾಏಕಿ ಮಲಗಿದ್ದವರ ಮೇಲೆ ಕುಸಿದಿದೆ. ಪರಿಣಾಮ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಶಾಸಕ ಬಿ. ನಾರಾಯಣ್ ರಾವ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಈ ಘಟನೆ ಬಸವಕಲ್ಯಾಣ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

https://www.youtube.com/watch?v=0KA45BHrY9A

Comments

Leave a Reply

Your email address will not be published. Required fields are marked *