9 ಸುಳ್ಳು ಕಥೆಗಳು ಸಿನಿಮಾದ ಟ್ರೇಲರ್ ಗೆ ಶಿವರಾಜಕುಮಾರ್ ಧ್ವನಿ

ಶೃಂಗಾರ, ಹಾಸ್ಯ, ಕರುಣ ಸೇರಿದಂತೆ ಹೀಗೆ  ನವರಸಗಳಿದೆ  ಇಂತಹ ನವರಸಗಳನ್ನು ಆಧರಿಸಿ “9 ಸುಳ್ಳು ಕಥೆಗಳು” ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ ಮಂಜುನಾಥ್ ಮುನಿಯಪ್ಪ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಟ್ರೇಲರ್ ಗೆ‌ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಧ್ವನಿ ನೀಡಿರುವುದು ಚಿತ್ರದ ವಿಶೇಷ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ, ಪತ್ರಕರ್ತ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದರು.

ಮೂಲತಃ ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳಿಂದ ಅನುಭವವಿರುವ ಮಂಜುನಾಥ್ ಮುನಿಯಪ್ಪ ನಿರ್ದೇಶಿಸಿ, ನಿರ್ಮಿಸಿರುವ ಮೊದಲ ಚಿತ್ರವಿದು.  ಈ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.  ಇದೊಂದು ನೈಜ ಘಟನೆ ಆಧಾರಿತ  ಚಿತ್ರ. ಕೆಲವು ಪುಸ್ತಕಗಳ ಹಾಗೂ ಸಣ್ಣಕಥೆಗಳನ್ನು ಓದಿದ್ದೀನಿ‌. ನವರಸಗಳನ್ನು ಆಧರಿಸಿ ಈ ಚಿತ್ರದ ಕಥೆ ಮಾಡಿದೆ‌‌.  ನಂತರ ನಿರ್ಮಾಪಕರಿಗೆ ಹುಡುಕಾಡಿದೆ.  ಯಾರು ಸಿಗಲಿಲ್ಲ. ನನ್ನ ಸ್ನೇಹಿತ ಸೂರ್ಯನಾರಾಯಣ್ ಮೊದಲು ದೊಡ್ಡ ಮೊತ್ತದ ಹಣ ನೀಡಿ ಈ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಸಾಕಷ್ಟು ಗೆಳೆಯರು ನನ್ನ ಜೊತೆಯಾದರು. ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕರಿ ಸುಬ್ಬು, ಸುಕೃತ ವಾಗ್ಲೆ,  ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಖ್ಯಾತ ನಟ ಶಿವರಾಜಕುಮಾರ್ ಅವರು ಟ್ರೇಲರ್ ಗೆ ಧ್ವನಿ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಸಂಗೀತ ನಿರ್ದೇಶನದಲ್ಲಿ ಆರು ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಮಂಜುನಾಥ್ ಮುನಿಯಪ್ಪ ಚಿತ್ರದ ಬಗ್ಗೆ ವಿವರಣೆ ನೀಡಿದರು. ಇದನ್ನೂ ಓದಿ: ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

ಚಿತ್ರದಲ್ಲಿ ಆರು ಹಾಡುಗಳಿದೆ. ಸಂತ ಶಿಶುನಾಳ ಶರೀಫರ ಗೀತೆಯೊಂದನ್ನು ಬಳಸಿಕೊಂಡಿದ್ದೇವೆ. ವಿಕ್ರಮ್ ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಹಾಡುಗಳನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಸೇರಿದಂತೆ ಪ್ರಸಿದ್ದ ಗಾಯಕರು ಈ ಹಾಡುಗಳನ್ನು ಹಾಡಿದ್ದಾರೆ‌. ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಇದೇ ಮೊದಲ ಬಾರಿಗೆ ನಮ್ಮ ಚಿತ್ರದ ಕನ್ನಡದ ಹಾಡೊಂದನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕರಾದ ಪ್ರವೀಣ್ & ಪ್ರದೀಪ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ನಾನು ಸಾಹಿತ್ಯ ಪ್ರೇಮಿಯಾಗಿ ಕಾಣಿಸಿಕೊಂಡಿದ್ದೀನಿ ಎಂದರು ನಟ ವಿನಾಯಕ ಜೋಶಿ.‌ ನಿರ್ದೇಶಕರು ನನ್ನ ಬಹುಕಾಲದ ಗೆಳೆಯ. ಉತ್ತಮ ಪಾತ್ರಕೊಟ್ಟಿದ್ದಾರೆ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಕರಿಸುಬ್ಬು ಮತ್ತು ಕೃಷ್ಣ ಹೆಬ್ಬಾಳೆ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.  ಈ ಚಿತ್ರಕ್ಕಾಗಿ ಮೈಲಿಗಟ್ಟಲೆ ಓಡಿದ ಅನುಭವವನ್ನು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್ ಹಂಚಿಕೊಂಡರು. ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸಕೃತ ವಾಗ್ಲೆ, ಕರಿಸುಬ್ಬು, ನಂದಗೋಪಾಲ್, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ವೀಳ್ಯಾ ರಾಘವೇಂದ್ರ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *