ಬಿಟ್ ಕಾಯಿನ್ ಕೇಸ್ – ಒಂದು ದಿನ ಮೊದಲೇ ವಿಚಾರಣೆಗೆ ಹಾಜರಾದ ನಲಪಾಡ್!

ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ (Bitcoin Case) ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್‌ (Nalapad), ನೋಟಿಸ್‌ ನೀಡಿದ್ದಕ್ಕಿದಂತ ಒಂದು ದಿನದ ಮುಂಚೆಯೇ ಎಸ್‌ಐಟಿ (SIT) ವಿಚಾರಣೆಗೆ ಹಾಜರಾಗಿದ್ದಾರೆ.

ಶುಕ್ರವಾರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿತ್ತು. ಮಾಧ್ಯಮಗಳ ಕಣ್ತಪ್ಪಿಸೋ ಸಲುವಾಗಿ ಇಂದೇ ನಲಪಾಡ್ ವಿಚಾರಣೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಬಾಲರಾಜು ಹೇಳಿಕೆ ದಾಖಲು ಮಾಡಿಕೊಳ್ಳುತ್ತಿದ್ದಾರೆ.

ನಲಪಾಡ್ ವಿರುದ್ಧ ಶ್ರೀಕಿ (Shriki) ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಅಲ್ಲದೇ ಶ್ರೀಕಿ ಜೊತೆಗೆ ಕೋಟ್ಯಂತರ ರೂ. ವ್ಯವಹಾರ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲ್ಪಾಡ್ ಅವರನ್ನು ಎಸ್‍ಐಟಿ ಆರೋಪಿ ಎಂದು ಪರಿಗಣಿಸಿತ್ತು. ಈ ಹಿಂದೆ ಹೇಳಿಕೆ ದಾಖಲು ಮಾಡಿದ್ದ ಎಸ್‍ಐಟಿ ಅಧಿಕಾರಿಗಳು. ಹೇಳಿಕೆಯ ಬಳಿಕ ಆರೋಪಿಯನ್ನಾಗಿಸಿತ್ತು.

ಪ್ರಕರಣದಲ್ಲಿ ಬಿಜೆಪಿ ಸರ್ಕಾರ ದುರುಪಯೋಗ ಮಾಡಿ ಕೋಟ್ಯಂತರ ರೂ. ಕೊಳ್ಳೆ ಹೊಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಅದರಂತೆ ಎಸ್‌ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು.

ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ನೀಡಿತ್ತು. ಸಾಮಾನ್ಯವಾಗಿ ಆರೋಪಿತರಿಗೆ ಈ ಸೆಕ್ಷನ್‌ ಅಡಿ ತನಿಖಾಧಿಕಾರಿ ನೋಟಿಸ್‌ ನೀಡಲಾಗುತ್ತದೆ. ಅದೇ ಸೆಕ್ಷನ್‌ ಅಡಿ ನಲಪಾಡ್ ಅವರಿಗೆ ಎರಡನೇ ಬಾರಿ ಎಸ್‌ಐಟಿ ವಿಚಾರಣೆಗೆ ಕರೆದಿರುವುದು ಬಂಧನ ಭೀತಿಗೆ ಕಾರಣವಾಗಿತ್ತು.