ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

ಕೋಲಾರ/ಚಿತ್ರದುರ್ಗ: ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ.

ಭವ್ಯ (10) ಮತ್ತು ಶಿಲ್ಪಾ(7) ಮೃತ ಸಹೋದರಿಯರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಗುರುವಾರ ಆಟವಾಡಲು ಹೋದಾಗ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಶಿಲ್ಪಾಳ ಶವ ದೊರಕಿದ್ದು, ಭವ್ಯ ಶವ ಪತ್ತೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳುಬಾಳು ಗುರುಪೀಠ ಶಾಂತಿ ವನದಲ್ಲಿರುವ ರೋಚೆಕ್ ಚೆಕ್ ಡ್ಯಾಂನಲ್ಲಿ ನಡೆದಿದೆ.

ದರ್ಶನ್(12), ಶಿವರಾಜ್(15) ಮತ್ತು ಆಕಾಶ್(15) ಮೃತ ದುರ್ದೈವಿಗಳು. ಬಾಲಕರು ಬೇಸಿಗೆ ಶಿಬಿರಕ್ಕೆ ಬಂದಿದ್ದು, ಚೆಕ್ ಡ್ಯಾಂನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಭರಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Comments

Leave a Reply

Your email address will not be published. Required fields are marked *