ಮದ್ಯ ನೀತಿ ಹಗರಣದಲ್ಲಿ ಸಿಸೋಡಿಯಾ ನಂ.1 ಆರೋಪಿ, ಕೇಜ್ರಿವಾಲ್‌ ಕಿಂಗ್‌ಪಿನ್‌ – ಕೇಂದ್ರ ಸಚಿವ ಆರೋಪ

ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ನಂಬರ್‌ 1 ಆರೋಪಿ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಈ ಹಗರಣದ ಕಿಂಗ್‌ಪಿನ್‌ ಆಗಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಠಾಕೂರ್‌, ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮನೀಶ್ ಸಿಸೋಡಿಯಾ ಅವರ ಹಗರಣದ ಬಣ್ಣ ಬಯಲಾಗಿದೆ. ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಹ ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 3-4 ದಿನಗಳಲ್ಲಿ ಸಿಬಿಐ-ಇಡಿ ನನ್ನ ಬಂಧಿಸಬಹುದು, ಯಾವುದಕ್ಕೂ ಹೆದರಲ್ಲ: ಮನೀಶ್ ಸಿಸೋಡಿಯಾ

ARVIND KEJRIWAL

ಎಎಪಿ ಇತರ ವಿಷಯಗಳನ್ನು ಮುಂದಿಟ್ಟುಕೊಂಡು ಅಬಕಾರಿ ಹಗರಣವನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಅವರು ಹಣ ಗಳಿಸುತ್ತಾರೆ. ನಂತರ ಮೌನವಹಿಸುತ್ತಾರೆ. ಅವರು ಮನೀಶ್‌ ಅಲ್ಲ, ʼಮನಿ ಶ್‌ʼ ಎಂದು ಕುಟುಕಿದ್ದಾರೆ.

ಮನೀಶ್ ಜೀ, ನಿಮ್ಮ ಮದ್ಯದ ನೀತಿ ಸರಿಯಾಗಿದ್ದರೆ, ಅದನ್ನು ಏಕೆ ವಾಪಸ್ ತೆಗೆದುಕೊಂಡಿದ್ದೀರಿ? ಮದ್ಯದ ಉದ್ಯಮಿಗಳಿಗೆ ಸಾಫ್ಟ್ ಕಾರ್ನರ್ ಏಕೆ? ಅರವಿಂದ್ ಕೇಜ್ರಿವಾಲ್ ಅವರು ಜನತೆ ಮುಂದೆ ಬಂದು 24 ಗಂಟೆಗಳ ಒಳಗೆ ಉತ್ತರಿಸಲಿ ಎಂದು ನಾನು ಸವಾಲು ಹಾಕುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Liquor Policy Scam – ಸಿಸೋಡಿಯಾ ಮೇಲೆ ಸಿಬಿಐ ದಾಳಿ ಮಾಡಿದ್ದು ಯಾಕೆ?

ದೆಹಲಿಯ ಅಬಕಾರಿ ಹಗರಣ ಪ್ರಕರಣದಲ್ಲಿ ಸಿಸೋಡಿಯಾ ಸೇರಿದಂತೆ 15 ಮಂದಿಯನ್ನು ಆರೋಪಿಗಳೆಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಹೆಸರಿಸಿದೆ. ಸಿಸೋಡಿಯಾ ಅವರ ಮನೆ ಮತ್ತು ದೆಹಲಿ-ಎನ್‌ಸಿಆರ್‌ನ ಇತರ 20 ಸ್ಥಳಗಳ ಮೇಲೆ ಕೇಂದ್ರೀಯ ಏಜೆನ್ಸಿ ನಡೆಸಿದ ದಾಳಿಗಳ ಮಧ್ಯೆ ಎಫ್‌ಐಆರ್ ಬಂದಿದೆ. ನಿವಾಸದ ಜತೆಗೆ ಉಪ ಮುಖ್ಯಮಂತ್ರಿ ಕಾರಿನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *