ಸರ್ ಪ್ಲೀಸ್ ಆಟೋಗ್ರಾಫ್ ಹಾಕಿ – ಮಕ್ಕಳ ಬೇಡಿಕೆಗೆ ಮಣಿದ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಕ್ಕಳ ಜೊತೆ ಮಕ್ಕಳಾದ ಪ್ರಸಂಗ ನಡೆಯಿತು. ಮಕ್ಕಳನ್ನ ನಗುಮುಖದಿಂದ ಮಾತನಾಡಿಸಿ ಮಕ್ಕಳ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಿದರು. ತಮ್ಮ ಬೇಡಿಕೆ ಈಡೇರಿಸಿದ್ದಕ್ಕೆ ಸಂತೋಷಗೊಂಡ ಮಕ್ಕಳು ತಮ್ಮ ಮುಗ್ಧ, ಮುದ್ದು ಮನಸ್ಸಿನಿಂದ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು.

ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ 100ಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದರು. ಸಿಎಂ ಕಾರ್ಯಕ್ರಮಕ್ಕೆ ಅರ್ಧ ಗಂಟೆ ತಡವಾಗಿ ಬಂದರು. ಕಾರ್ಯಕ್ರಮಕ್ಕೆ ಬಂದ ಕೂಡಲೇ ಸಿಎಂ ಬೊಮ್ಮಾಯಿ ಅವರು ಮಕ್ಕಳನ್ನು How are u? ಎಂದು ಕೇಳಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಕೆ.ಸಿ.ರೆಡ್ಡಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

ಕಾರ್ಯಕ್ರಮ ಮುಗಿಸಿ ಹೊರಟ ಮುಖ್ಯಮಂತ್ರಿಗಳನ್ನ ಮಕ್ಕಳು ಬಿಡಲಿಲ್ಲ. ಸರ್ ಪ್ಲೀಸ್ ಆಟೋಗ್ರಾಫ್ ಹಾಕಿ ಅಂತ ಬೇಡಿಕೆ ಇಟ್ಟರು. ಮಕ್ಕಳ ಮಾತಿಗೆ ಮಣಿದ ಸಿಎಂ ಮಕ್ಕಳಿಗೆ wish you the Happy in your life ಅಂತ ಮಕ್ಕಳಿಗೆ ಆಟೋಗ್ರಾಫ್ ಹಾಕಿದರು. ಮುಖ್ಯಮಂತ್ರಿಗಳು ಆಟೋಗ್ರಾಫ್ ನೀಡಿದ್ದಕ್ಕೆ ಪುಳಕಿತಾದ ಮಕ್ಕಳು ನಗುಮುಖದಿಂದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದರು.

Comments

Leave a Reply

Your email address will not be published. Required fields are marked *