ತೀರ್ಪುಗಾರ್ತಿ ನೇಹಾ ಕಕ್ಕರ್​ಗೆ ಕಿಸ್ ಕೊಟ್ಟ ಸ್ಪರ್ಧಿ-ವಿಡಿಯೋ ವೈರಲ್

ಮುಂಬೈ: ಖಾಸಗಿ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳ ಹಬ್ಬವೇ ಆರಂಭಗೊಂಡಿವೆ. ಒಂದಾದ ನಂತರ ಒಂದು ರಿಯಾಲಿಟಿ ಶೋಗಳನ್ನು ನಡೆಸುವ ಮೂಲಕ ಖಾಸಗಿ ವಾಹಿನಿಗಳ ವೀಕ್ಷಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿವೆ. ಸಿಂಗಿಂಗ್ ರಿಯಾಲಿಟಿ ಶೋ ತೀರ್ಪುಗಾರರ ಸ್ಥಾನದಲ್ಲಿ ಗಾಯಕಿ ನೇಹಾ ಕಕ್ಕರ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸ್ಪರ್ಧಿಯೋರ್ವ ತೀರ್ಪುಗಾರ್ತಿಯಾದ ನೇಹಾ ಕಕ್ಕರ್​ಗೆ ಮುತ್ತು ನೀಡಿದ್ದಾನೆ.

ಹಿಂದಿಯ ಖಾಸಗಿ ವಾಹಿನಿಯಲ್ಲಿ ಬರುವ ಇಂಡಿಯನ್ ಐಡಲ್ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈಗಾಗಲೇ 10 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಶೋ, 11ನೇ ಅವೃತ್ತಿಗೆ ಕಾಲಿಟ್ಟಿದೆ. ಈ ಸಂಬಂಧ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋಗಳನ್ನು ಹರಿಬಿಡುತ್ತಿದೆ. ಬುಧವಾರ ಹೊರ ಬಂದ ಪ್ರೋಮೋದಲ್ಲಿ ನೇಹಾ ಕಕ್ಕರ್ ಗೆ ಸ್ಪರ್ಧಿಯೋರ್ವ ಬಲವಂತವಾಗಿ ಕೆನ್ನೆಗೆ ಮುತ್ತಿಕ್ಕಿದ್ದಾನೆ. ಸ್ಪರ್ಧಿ ಮುತ್ತಿಕ್ಕಿದ ಕೂಡಲೇ ನೇಹಾ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ.

ಪ್ರೋಮೋದಲ್ಲಿ ಹಲವು ಪ್ರತಿಭಾನ್ವಿತ ಸ್ಪರ್ಧಿಗಳು ತಮ್ಮ ಸಂಗೀತ ಪ್ರತಿಭೆಯ ಮೂಲಕ ತೀರ್ಪುಗಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಸಾಂಪ್ರದಾಯಿಕ ವೇಷ ತೊಟ್ಟು, ಕೆಲವು ಉಡುಗೊರೆಗಳೊಂದಿಗೆ ಶೋಗೆ ಆಗಮಿಸಿದ್ದಾನೆ. ನಿರೂಪಕ ಜಯ್ ಮುಂದೆ ನೇಹಾರಿಗೆ ಇಂಪ್ರೆಸ್ ಮಾಡಲು ಯತ್ನಿಸಿದ್ದಾನೆ. ಆತನಿಂದ ಗಿಫ್ಟ್ ಪಡೆದುಕೊಂಡ ನೇಹಾ, ಆತ್ಮೀಯತೆಯಿಂದ ಸ್ಪರ್ಧಿಯನ್ನು ಅಪ್ಪಿಕೊಂಡಿದ್ದಾರೆ. ಈ ವೇಳೆ ಹತ್ತಿರ ಬಂದ ನೇಹಾರ ಕೆನ್ನೆಗೆ ಸ್ಪರ್ಧಿ ಕಿಸ್ ಕೊಟ್ಟಿದ್ದಾನೆ.

https://www.instagram.com/tv/B3rAS-pFdcc/?utm_source=ig_embed

Comments

Leave a Reply

Your email address will not be published. Required fields are marked *