ಮಾಡೆಲ್‌ ಜೊತೆ ಸಿಂಗರ್‌ ಹನುಮಂತ ರ‍್ಯಾಂಪ್‌ವಾಕ್- ಬ್ಯಾಚುಲರ್‌ ಹುಡುಗನ ನಯಾ ಸ್ಟೈಲ್

ಕುರಿಗಾಹಿ ಸಿಂಗರ್ ಹನುಮಂತ (Singer Hanumantha) ಈತನದ್ದು ಒಂಥರಾ ಡಿಫರೆಂಟ್ ವ್ಯಕ್ತಿತ್ವ, ಹೀಗಾಗೇ ಈತ ಎಲ್ಲರಿಗಿಂತ ವಿಭಿನ್ನ ಅನ್ನಿಸೋದು, ತಾಂಡಾದಿಂದ ಬಂದು ಪಟ್ಟಣ ಸುತ್ತಾಡಿದ್ರೂ ಈತನ ನಡೆ ನುಡಿ ಬದಲಾಗಿಲ್ಲ. ಆದರೆ ಈಗ ಹುಡ್ಗಿಗಾಗಿ ಕೊನೆಗೂ ಬದಲಾದ ಹನುಮಂತ. ಲುಂಗಿ ಬದಲು ಸೂಟುಬೂಟು, ಮಾಡರ್ನ್ ಹೇರ್‌ಸ್ಟೈಲ್ ಟ್ರೆಂಡಿಬಿಯರ್ಡ್ ಲುಕ್‌ನಲ್ಲಿ ರ‍್ಯಾಂಪ್‌ವಾಕ್ ಮಾಡಿದ್ದಾನೆ, ಮಗನ ಬದಲಾವಣೆಗೆ ಅಮ್ಮನೇ ಕಂಗಾಲಾಗಿದ್ದಾರೆ. ಹನುಮಂತನ ಹೊಸ ಇನ್ನಿಂಗ್ಸ್ ಅಂತೂ ಭರ್ಜರಿಯಾಗಿದೆ.ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

ಐದನೇ ಕ್ಲಾಸ್ ಓದ್ಕೊಂಡು ಗುರುವಿಲ್ಲದೇ ಸಂಗೀತ ಕಲಿತು ಸರಿಗಮಪ ವೇದಿಕೆ ಏರಿದ್ದವ ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರ ಬಡ್ನಿ ತಾಂಡಾದ ಕುರಿಗಾಹಿ ಹನುಮಂತ. ಭರ್ತಿ 5 ವರ್ಷಗಳಿಂದ ಕರುನಾಡಿಗೆ ಪರಿಚಿತವಾಗಿರುವ ಈತ ತನ್ನದೇ ಜವಾರಿ ಸ್ಟೈಲ್‌ನಿಂದಲೇ ಜನಮನಗೆದ್ದ ಗಾಯಕ, ಸರಿಗಮಪ ಸೀಸನ್ 15ರ ಫಸ್ಟ್‌ ರನ್ನರ್‌ ಅಪ್. ಫಿಲ್ಟರ್ ಇಲ್ಲದ ಮಾತು ಬಣ್ಣವಿಲ್ಲದ ಬದುಕಿನಿಂದ ಕುರಿಗಾಹಿ ಹನುಮಂತ ಎಲ್ಲರಿಗಿಂತ ಭಿನ್ನ ಸಾಲಿನಲ್ಲಿ ನಿಲ್ತಾನೆ, ಕಂಠದಿಂದಲೇ ಖ್ಯಾತಿಗಳಿಸಿದ ಹಳ್ಳಿ ಹೈದ ಮತ್ತೀಗ ಹೊಸ ರೂಪದಲ್ಲಿ ಕಿರುತೆರೆಗೆ ರೀ ಎಂಟ್ರಿಕೊಟ್ಟಿದ್ದಾನೆ, ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಸುದ್ದಿಯಾಗ.. ಬಳಿಕ ಡಿಕೆಡಿಯಲ್ಲಿ ಕುಣಿದು ಖ್ಯಾತಿಗಳಿಸಿದ ಈಗ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಕಾರ್ಯಕ್ರಮದ ಮೂಲಕ ಕರುನಾಡಲ್ಲಿ ಹಂಗಾಮಾ ಸೃಷ್ಟಿಸಿದ್ದಾನೆ.

‌’ಭರ್ಜರಿ ಬ್ಯಾಚುಲರ್ಸ್’ ಕಾರ್ಯಕ್ರಮಕ್ಕೆ ಕುರಿಗಾಹಿ ಹನುಮಂತ ಓರ್ವ ಸ್ಪರ್ಧಿ, ಎಂದಿನಂತೆ ಮುಗ್ಧತೆಯಿಂದ ಹನುಮಂತ ಎಂಟ್ರಿ ಕೊಟ್ಟಿದ್ದಾನೆ, 10 ಹುಡುಗರಿಗೆ 10 ಹುಡುಗಿಯರನ್ನ ಜೋಡಿ ಮಾಡುವ ವಿಭಿನ್ನ ಕಾರ್ಯಕ್ರಮ. ಆರಂಭದಲ್ಲಿ ಎಂದಿನಂತೆ ಲುಂಗಿ ಶರ್ಟ್‌ನಲ್ಲೇ ಎಂಟ್ರಿ ಕೊಟ್ಟ ಹನುಮ ಜಂಟಿಯಾದ ಬಳಿಕ ಹಳೆಯ ಜಂಜಾಟಕ್ಕೆ ಜೂಟ್ ಅಂದಿದ್ದಾನೆ. ಹನುಮಂತನ ಬಾಳಲ್ಲಿ ಮಾಡೆಲ್/ನಟಿ ಆಸಿಯಾ ಬೇಗಂ ಎಂಟ್ರಿಯಾಗಿದೆ, ಟಾಸ್ಕ್ ಪ್ರಕಾರ ಹನುಮಂತನನ್ನ ಮಾಡರ್ನ್ ಹುಡುಗನನ್ನಾಗಿ ಮಾಡಬೇಕು. ಈ ಟಾಸ್ಕ್‌ನಲ್ಲಿ ಆಸಿಯಾ ಯಶಸ್ವಿಯಾಗಿದ್ದಾರೆ, ಆದರೆ ಈ ದಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಹನುಮಂತ ಅಷ್ಟು ಬೇಗ ಆಸಿಯಾ ಮಾತಿಗೆ ಮಣಿಯಲಿಲ್ಲ.

ಮನೆಯಿಂದ ಮಾಲ್‌ಗೂ ಲುಂಗಿಯಲ್ಲೇ ಕಾಣಿಸ್ಕೊಳ್ಳುವ ಹನುಮಂತನನ್ನ ಬದಲಾಯಿಸೋದು ಸುಲಭದ ಮಾತಲ್ಲ. ಪ್ಯಾಂಟ್ ಅಂದ್ರೇನೇ ಅಸಡ್ಡೆ ಮಾಡುವ ಕುರಿಬಾಯ್‌ನ್ನು ಆಸಿಯಾ ಬೇಗಂ (Asiya Begham) ಕೊರಿಯನ್ ಬಾಯ್ ಮಾಡಿದ್ದಾರೆ. ಯಾಕಂದ್ರೆ ಆಸಿಯಾ ಕನಸಿನ ಹುಡುಗ ಕೊರಿಯನ್ ಬಾಯ್ ರೀತಿಯಲ್ಲಿ ಇರಬೇಕೆಂದು ಆಸೆಪಟ್ಟಿದ್ದರು. ಆದರೆ ಆಸಿಯಾಗೆ ಕುರಿಬಾಯ್ ಸಿಕ್ಕಿದ್ದಾನೆ. ಮೊದಲ ಟಾಸ್ಕ್‌ನಲ್ಲೇ ಹನುಮನ ಜೋಡಿ ಯಶಸ್ವಿ.

ಹನುಮಂತನ ಹೊಸ ಅವತಾರ ನೋಡೋಕೆ ತಾಯಿ ಕೂಡ ರ‍್ಯಾಂಪ್ ಮೇಲೆ ಪ್ರತ್ಯಕ್ಷರಾಗಿದ್ದಾರೆ. ಹಲವು ವರ್ಷಗಳಿಂದ ಮಗನಿಗೆ ಮದುವೆ ಮಾಡಬೇಕನ್ನೋದು ತಾಯಿಯ ಕನಸು, ಈಗ ಬದಲಾದ ಮಗನನ್ನ ಕಣ್ಣೆದುರೇ ನೋಡಿ ಖುಷಿ ಪಟ್ಟಿದ್ದಾರೆ ಹನುಮನ ಹಡೆದವ್ವ, ವೇದಿಕೆಯಲ್ಲಿ ಅಮ್ಮ ಬಂದ ಖುಷಿಯಲ್ಲಿ ಅಮ್ಮನ ಕೈಹಿಡಿದು ರ‍್ಯಾಂಪ್‌ವಾಕ್ ಮಾಡಿದ್ದಾನೆ ಹನುಮ. ಒಟ್ನಲ್ಲಿ ಕುರಿಗಾಹಿ ಹನುಮಂತನ ಎರಾ ಮುಗಿದಿಲ್ಲ. ಒಂದಿಲ್ಲೊಂದು ರೂಪದಲ್ಲಿ ಕನ್ನಡಿಗರೆದುರು ಪ್ರತ್ಯಕ್ಷವಾಗುತ್ತಲೆ ಇದ್ದಾನೆ ಹನುಮಂತ. ಹಳ್ಳಿಯವನೇ ಆದ್ರೂ ಓದು ಬರಹ ಬರದೇ ಇದ್ರೂ ಹನುಮ ದುಡುಕದ ಬುದ್ಧಿವಂತ, ಈಗಷ್ಟೇ ಹನುಮನ ಹೊಸ ಚರಿತ್ರೆ ಆರಂಭವಾಗಿದೆ, ಇನ್ಮೇಲೆ ಏನೆಲ್ಲಾ ಸರ್‌ರ್ಪೈಸ್‌ಗಳು ಎದುರಾಗುತ್ತದೋ ನೋಡಬೇಕು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]