ಸ್ಟೈಲಿಶ್ ಆಗಿ ಕಾಣಲು ಸರಳ ಟಿಪ್ಸ್

ಲ್ಲರಿಗೂ ಸ್ಟೈಲಿಶ್ ಆಗಿ ಕಾಣಬೇಕು ಎಂದು ಅನಿಸುತ್ತಿರುತ್ತೆ. ಆದರೆ ಕೆಲವೊಮ್ಮೆ ಅವರು ಹಾಕಿಕೊಳ್ಳುವ ಉಡುಪು, ಮೇಕಪ್ ಮತ್ತು ಅವರು ಬಳಸುವ ವಸ್ತುಗಳು ಸ್ಟೈಲಿಶ್ ಎನಿಸುವುದಿಲ್ಲ. ಅದಕ್ಕೆ ಸರಳ ಮತ್ತು ನಿಮ್ಮ ಬಳಿಯಲ್ಲೇ ಇರುವ ಬಟ್ಟೆಗಳಿಂದ ಹೇಗೆ ಸ್ಟೈಲಿಶ್ ಕಾಣಬೇಕು ಎಂಬುದಕ್ಕೆ ಇಲ್ಲಿಗೆ ಸರಳ ಟಿಪ್ಸ್‌ಗಳು. ಸರಿಯಾದ ಫ್ಯಾಷನ್ ಐಡಿಯಾ ಇದ್ರೆ ಡ್ರೆಸಿಂಗ್‍ನಲ್ಲಿ ಜನರಿಗೆ ಕಾನ್ಫಿಡೆಂಟ್ ಇರುತ್ತೆ.

ವಾರ್ಡ್ರೋಬ್
ಎಲ್ಲರ ವಾರ್ಡ್ರೋಬ್ ನಲ್ಲಿಯೂ ಸಾಮಾನ್ಯವಾಗಿ ಕುರ್ತ, ಟಾಪ್, ಜೀನ್ಸ್, ಕ್ಲಾಸಿಕ್ ಬ್ಲೇಜರ್, ಟಿ-ಶಟ್‍ಗಳು, ಜಾಕೆಟ್‍ಗಳು ಇರುತ್ತೆ. ಇದನ್ನೆ ಬಳಸಿಕೊಂಡು ಟ್ರೆಂಡಿ ಲುಕ್ ಹೇಗೆ ಪಡೆಯಬಹುದು ಎಂದು ಇಲ್ಲಿ ಟಿಪ್ಸ್ ಕೊಡಲಾಗುತ್ತೆ.

ಕಾಂಬಿನೇಷನ್ ಡ್ರಸ್
ನೀವು ಡ್ರೆಸ್ ಸೆಲೆಕ್ಟ್ ಮಾಡಿಕೊಳ್ಳುವಾಗ ಟಾಪ್ ಹೆಚ್ಚು ಬ್ರೈಟ್ ಕಲರ್ ಇದ್ರೆ, ಪ್ಯಾಂಟ್ ಸ್ವಲ್ಪ ಲೈಟ್ ಕಲರ್ ಹಾಕಿಕೊಳ್ಳಿ. ಇದು ನಿಮ್ಮ ಕಡೆ ಜನರು ಆಕರ್ಷಿತರಾಗುವಂತೆ ಮಾಡಲು ಸಹಾಯ ಮಾಡುತ್ತೆ. ಇದರಿಂದ ನಿಮ್ಮ ಲುಕ್‍  ಭಿನ್ನವಾಗಿ ಕಾಣಿಸುತ್ತೆ.

Women's top with pants||#Girl's top with trouser||Loose plazzo designs||#Cotton #pants with top|| - YouTube

ಫಿಟ್ ಡ್ರೆಸ್-ಲೂಸ್ ಡ್ರೆಸ್
ಕುರ್ತಗಳು ನಿಮ್ಮ ದೇಹಕ್ಕೆ ಸರಿಯಾಗಿ ಫಿಟ್ ಆಗಿದ್ರೆ ಚೆನ್ನಾಗಿ ಕಾಣಿಸುತ್ತೆ. ಅಂದ್ರೆ ಟಿ-ಶಾರ್ಟ್‍ಗಳು ಲುಸ್ ಆಗಿದ್ರೆ ನಿಮಗೆ ಲುಕ್ ಬೇರೆ ರೀತಿಯೇ ಇರುತ್ತೆ. ನೋಡುಗರಿಗೂ ಸಹ ಸ್ಟೈಲಿಶ್ ಆಗಿ ಮತ್ತು ಟ್ರೆಂಡಿ ಲುಕ್‍ಯಾಗಿ ಕಾಣಿಸುವಿರಿ. ಫಿಟ್ ಡ್ರೆಸ್ ತುಂಬಾ ಮುಖ್ಯ ಅಂದ್ರೆ, ಇದು ಎಲ್ಲ ಉಡುಪಿಗೂ ಚೆನ್ನಾಗಿ ಕಾಣಿಸುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಡ್ರೆಸ್ ಆಯ್ಕೆ ಮಾಡಿಕೊಳ್ಳಬೇಕು. ಫಿಟ್ ಡ್ರೆಸ್‍ಗೆ ಟೈಲರಿಂಗ್ ತುಂಬಾ ಮುಖ್ಯ.

ದೇಹಕ್ಕೆ ಸರಿಯಾಗಿ ಹೊಂದುವ ಡ್ರೆಸ್
ಹೆಚ್ಚು ದಪ್ಪ ಇದ್ದವರು ಟಿ-ಶರ್ಟ್ ಹಾಕಿಕೊಂಡ್ರೂ ಚೆನ್ನಾಗಿ ಕಾಣಿಸುತ್ತಿಲ್ಲವೆಂದರೆ ನಿಮ್ಮ ದೇಹಕ್ಕೆ ಫಿಟ್ ಆಗಿರುವುದಕ್ಕಿಂತ ಲೂಸ್ ಟಿ-ಶರ್ಟ್ ಹಾಕಿಕೊಂಡು ಟ್ರಾಯ್ ಮಾಡಿ ನೋಡಿ. ಸಮಾರಂಭಕ್ಕೆ ಕುರ್ತವನ್ನು ನಿಮ್ಮ ದೇಹಕ್ಕೆ ಸರಿಹೊಂದುವ ರೀತಿ ಕ್ಲಾಸಿಕ್ ಲುಕ್‍ನಲ್ಲಿ ಸ್ಟಚ್ ಮಾಡಿಸಿಕೊಳ್ಳಿ. ಕ್ಲಾಸಿಕ್ ಎಂದರೆ ಫುಲ್ ಪ್ಲೈನ್ ಗೌನ್‍ಗೆ ನೆಕ್ ಅಥವಾ ಡ್ರೆಸ್ ಸೆಂಟರ್‍ಗೆ ಡಿಸೈನ್ ಇದ್ದಾರೆ ತುಂಬಾ ಚೆನ್ನಾಗಿ ಕಾಣಿಸುತ್ತೆ.

ಬೆಲ್ಟ್
ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗಿರುವುದು ಬೆಲ್ಟ್. ಯಾವುದೇ ಉಡುಪನ್ನು ಫಿಟ್ ಮತ್ತು ಟ್ರೆಂಡಿ ಲುಕ್ ಕಾಣಿಸುವಂತೆ ಮಾಡಲು ಬೆಲ್ಟ್ ತುಂಬಾ ಸಹಾಯಕವಾಗುತ್ತೆ. ಎಲ್ಲಕ್ಕಿಂತ ಮೂಖ್ಯವಾಗಿ ನಿಮ್ಮ ಬಣ್ಣಕ್ಕೆ ಯಾವ ಕಲರ್ ಸೂಟ್ ಆಗುತ್ತೆ ಎಂಬುದನ್ನು ತಿಳಿದುಕೊಂಡು ನಂತರ ಡ್ರೆಸ್ ಸೆಲೆಕ್ಟ್ ಮಾಡಿಕೊಳ್ಳಿ.

ಮೇಕಪ್
ನೀವು ಹಾಕಿಕೊಳ್ಳುವ ಡ್ರೆಸ್‍ಗೆ ಸರಿಯಾಗಿ ಹೊಂದಿಕೆಯಾಗುವಂತೆ ಮೇಕಪ್ ಮಾಡಿಕೊಳ್ಳುವುದು ತುಂಬಾ ಮುಖ್ಯ. ಕಣ್ಣು, ಐಬ್ರೌ, ಲಿಪ್‍ಸ್ಟಿಕ್ ನಿಮ್ಮ ಡ್ರೆಸ್ ನೋಡಿ ಆಯ್ಕೆ ಮಾಡಿಕೊಳ್ಳಬೇಕು. ಮೇಕಪ್‍ನಲ್ಲಿ ಕಣ್ಣನ್ನು ಹೆಚ್ಚು ಹೈಲೈಟ್ ಮಾಡಿದ್ರೆ ಲಿಪ್ ನ್ಯೂಡ್ ಆಗಿ, ಸಿಂಪಲ್ ಕಲರ್‌ನಲ್ಲಿ ಇದ್ರೆ ಚೆನ್ನಾಗಿ ಕಾಣಿಸುತ್ತೆ. ಹೀಗೆ ನೀವು ಮಾಡುವ ಮೇಕಪ್ ಒಂದಕ್ಕೊಂದು ಮ್ಯಾಚ್ ಆಗಿರಬೇಕು.

Comments

Leave a Reply

Your email address will not be published. Required fields are marked *