ಪಾಕಿಸ್ತಾನದಲ್ಲಿ ಸಿಖ್‌ ವ್ಯಾಪಾರಿಗೆ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್‌: ಮೋಟಾರ್‌ಸೈಕಲ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಸಿಖ್‌ ವ್ಯಾಪಾರಿಯನ್ನು (Sikh Trader) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ.

ಪೇಶಾವರದ ಕಕ್ಷಾಲ್ ನಿವಾಸಿ ಮನಮೋಹನ್ ಸಿಂಗ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಗುಲ್ದಾರ ಚೌಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಿಂಗ್ ಅವರ ಮೇಲೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದಾರೆ ಎಂದು ಅಬ್ದುಲ್‌ ಸಲಾಂ ಖಲಿದ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಮಾಡ್ತಿದ್ದಾನೆಂದು ಊಬರ್ ಚಾಲಕನಿಗೆ ಗುಂಡಿಕ್ಕಿ ಕೊಂದ ಮಹಿಳೆ

ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯು ಉದ್ದೇಶಿತ ಹತ್ಯೆಯೇ, ಇಲ್ಲವೇ ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಖಲಿದ್‌ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಅದೇ ಪ್ರದೇಶದಲ್ಲಿ ಮತ್ತೊಬ್ಬ ಸಿಖ್‌ ವ್ಯಾಪಾರಿ ಮೇಳೆ ದಾಳಿ ನಡೆಸಲಾಗಿತ್ತು. ದಗ್ಗರಿ ನಿವಾಸಿ ತರ್ಲೋಗ್ ಸಿಂಗ್ ಕಾಲಿಗೆ ಗುಂಡು ತಗುಲಿತ್ತು. ಗಾಯಗೊಂಡಿದ್ದ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ. ಇದನ್ನೂ ಓದಿ: ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

ಕಳೆದ ವರ್ಷದ ಮೇ ತಿಂಗಳಲ್ಲಿ ದಯಾಳ್ ಸಿಂಗ್ ಎಂಬ ವ್ಯಕ್ತಿಯ ಇಬ್ಬರು ಸೋದರ ಸಂಬಂಧಿಗಳಾದ ರಂಜಿತ್ ಸಿಂಗ್ ಮತ್ತು ಕೊಲ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಇದು ಭಯೋತ್ಪಾದಕ ದಾಳಿ ಇರಬಹುದು ಎಂದು ಎಫ್‌ಐಆರ್‌ ದಾಖಲಿಸಲಾಗಿದೆ.