ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ

ಕ್ಷಿಣದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುತ್ತಿವೆ. ಹೀಗಾಗಿ ಬಾಲಿವುಡ್ ಮಂದಿಗೆ ನಡುಕ ಶುರುವಾಗಿದೆ. ಕೇವಲ ಸಿನಿಮಾಗಳು ಮಾತ್ರವಲ್ಲ, ದಕ್ಷಿಣದ ಸ್ಟಾರ್ ಗಳು ಕೂಡ ಬಾಲಿವುಡ್ ಮಂದಿಯ ಮನಸ್ಥಿತಿಯನ್ನು ಒಬ್ಬೊಬ್ಬರಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಬಾಲಿವುಡ್ ಮಂದಿಯ ಬಣ್ಣ ಬಯಲಾಗುತ್ತಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

ಹಿಂದಿ ಸಿನಿಮಾ ರಂಗದ ಕುರಿತು ಸ್ವತಃ ಕಂಗನಾ ರಣಾವತ್ ಅವರೇ ಆರೋಪದ ಮಾತುಗಳನ್ನು ಆಡಿದ್ದರು. ಬಾಲಿವುಡ್ ಕೆಲವರ ಕೈಯಲ್ಲಿ ಮಾತ್ರ ಇದೆ ಎಂದು ಹೇಳಿದ್ದರು. ಸ್ಟಾರ್ ನಟರ ಮಕ್ಕಳ  ಬಗ್ಗೆಯೂ ಮಾತನಾಡಿದ್ದರು. ಇದೀ ತೆಲುಗಿನ ಖ್ಯಾತ ನಟ ಸಿದ್ಧಾರ್ಥ ಕೂಡ ಬಾಲಿವುಡ್ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣದವರನ್ನು ಅವರು ಕೀಳು ಮಟ್ಟದಲ್ಲಿ ತೋರಿಸುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

ಸದ್ಯ ಸಿದ್ಧಾರ್ಥ ನಟನೆಯ ಎಸ್ಕೇಪ್ ಪ್ಲಾನ್ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣದವರ ಪಾತ್ರವನ್ನು ಕೀಳಾಗಿ ಬಿಂಬಿಸಲಾಗುತ್ತಿತ್ತು. ದಕ್ಷಿಣದ ಪಾತ್ರಗಳು ಇದ್ದರೆ, ಅವುಗಳ ಡೈಲಾಗ್ ಕೂಡ ಅಷ್ಟೇ ಕೆಟ್ಟದ್ದಾಗಿ ಇರುತ್ತಿದ್ದವು ಎಂದು ಹಲವು ಉದಾಹರಣೆಗಳ ಸಮೇತ ಅವರು ವಿವರಿಸಿದ್ದಾರೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

ದಕ್ಷಿಣದ ಹಲವು ಚಿತ್ರಗಳ ಬಗ್ಗೆಯೂ ಮಾತನಾಡಿರುವ ಅವರು, ಹೆಮ್ಮೆಯಿಂದ ಹೊಸ ರೀತಿಯ ಚಿತ್ರಗಳನ್ನು ದಕ್ಷಿಣ ಭಾರತದ ನಿರ್ದೇಶಕರು ಮಾಡುತ್ತಿದ್ದಾರೆ. ಈ ಮೂಲಕ ಅವಮಾನದ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದೂ ಸಿದ್ಧಾರ್ಥ ಮಾತನಾಡಿದ್ದಾರೆ.

Comments

Leave a Reply

Your email address will not be published. Required fields are marked *