ಹನುಮ ಜಯಂತಿಗೆ ಸಿಎಂ ಶುಭಾಶಯ – ಟಾಂಗ್ ಕೊಟ್ಟ ಬಿಜೆಪಿ

ಬೆಂಗಳೂರು: ಇಂದು ಹನುಮ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

“ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ವಚನಗಳನ್ನು ಬಳಸಿಕೊಂಡು ಕೈ, ಕಮಲ ಟಾಂಗ್!

ಹನುಮ ಜಯಂತಿಗೆ ಶುಭಾಶಯ ಕೋರಿದ ಸಿಎಂಗೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ ಟಾಂಗ್ ನೀಡಿದ್ದು, “ಟ್ವಿಟ್ಟರ್ ನಲ್ಲಿ ಶುಭಾಶಯ ಕೋರುವುದು ಹಾಗಿರಲಿ ಸರ್. ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು. ಈಗ ಮಾತ್ರ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರುತ್ತಿರಲ್ಲ. ಏನು ಅನ್ನಿಸುವುದಿಲ್ಲವಾ ಎಂದು ಪ್ರಶ್ನಿಸಿ ಸಿಎಂ ಟ್ವೀಟ್ ಗೆ ರೀ ಟ್ವೀಟ್ ಮಾಡಿದೆ.

Comments

Leave a Reply

Your email address will not be published. Required fields are marked *