ಸಿದ್ದರಾಮಯ್ಯ ಬಣದಿಂದ ಡಿಕೆಶಿ ಬಣಕ್ಕೆ ಜಿಗಿದ್ರಾ ಶಿಷ್ಯರು?

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಿಂದ ಹೊರ ಬರುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಗುಂಪುಗಳು ಹುಟ್ಟಿಕೊಂಡಿದ್ದು, ಸಿದ್ದರಾಮಯ್ಯನವರ ಆಪ್ತರು ಡಿಕೆಶಿ ಬಣಕ್ಕೆ ಜಿಗಿದ್ರಾ ಎಂಬ ಸುದ್ದಿಯೊಂದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಆಚರಣೆ ತಂದಿದ್ದರು. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರಿ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿದೆ. ಇಷ್ಟು ದಿನ ಟಿಪ್ಪು ಜಯಂತಿಯನ್ನು ಸಮರ್ಥಿಸಿಕೊಂಡು ಬಂದಿದ್ದ ಸಿದ್ದರಾಮಯ್ಯನವರ ಆಪ್ತ ಸಿಎಂ ಇಬ್ರಾಹಿಂ ಯೂಟರ್ನ್ ತೆಗೆದುಕೊಂಡಿದ್ದಾರೆ. ಟಿಪ್ಪು ಜಯಂತಿ ಆಚರಣೆಯೇ ಸರಿ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯನವರಿಗೆ ಶಾಕ್ ನೀಡಿದ್ದಾರೆ.

ಕಾಂಗ್ರೆಸ್‍ನಲ್ಲಿ ಮೊದಲಿನಿಂದಲೂ ವಲಸೆ ಕಾಂಗ್ರೆಸ್ಸಿಗ ಮತ್ತು ಮೂಲ ಕಾಂಗ್ರೆಸ್ಸಿಗ ಎಂಬ ಎರಡು ಗುಂಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಡಿಕೆ ಶಿವಕುಮಾರ್ ಜೈಲಿನಿಂದ ಹೊರ ಬಂದ ಕಾಂಗ್ರೆಸ್‍ನಲ್ಲಿ ಮೂರು ಬಣಗಳು ಹುಟ್ಟಿಕೊಂಡಿವೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಇಂದು ಹೇಳಿದ್ದಾರೆ. ಎಂಟಿಬಿ ಹೇಳಿಕೆಗೆ ಪೂರಕ ಎನ್ನುವಂತೆ ಸಿಎಂ ಇಬ್ರಾಹಿಂ ಪರೋಕ್ಷವಾಗಿ ಸಿದ್ದರಾಮಯ್ಯನವರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಇಬ್ರಾಹಿಂ ಭಾನುವಾರ ಡಿಕೆ ಶಿವಕುಮಾರ್ ಅವರನ್ನು ಭೇಟಿ ಬೆನ್ನಲ್ಲೇ ಈ ಹೇಳಿಕೆ ನೀಡಿರೋದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗಿಂತ ಬಿಜೆಪಿ ಬಂಡಾಯ ಅಭ್ಯರ್ಥಿಯದ್ದೇ ಭಯ: ಎಂಟಿಬಿ

ಕಾಂಗ್ರೆಸ್‍ನಲ್ಲಿ ಮೂರು ಬಣಗಳಾಗಿದೆ. ಒಂದು ಸಿದ್ದರಾಮಯ್ಯ ಗುಂಪು, ಮತ್ತೊಂದು ಮೂಲ ಗುಂಪು, ಇನ್ನೊಂದು ಪರಮೇಶ್ವರ್ ಗುಂಪು. ಈ ಗುಂಪುಗಾರಿಕೆ ಮಾಡಿಯೇ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಗೆದ್ದಿದ್ದು ತಾನೇ. ಈಗ ಡಿಕೆಶಿ ಬಂದಿದ್ದಾರಲ್ಲ. ಹಾಗಾಗಿ ಟಿಪ್ಪು ಜಯಂತಿ ವಿರೋಧಿಸಿ ಇಬ್ರಾಹಿಂ ಹೇಳಿರಬಹುದು ಅಂತ ಎಂಟಿಬಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಬಾವುಟ ಹಿಡಿದಿದ್ದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ: ಹೆಚ್‍ಡಿಕೆ

Comments

Leave a Reply

Your email address will not be published. Required fields are marked *