ಡಿಕೆಗೆ ಸಿಎಂ ಸ್ಥಾನ ಹೇಳಿಕೆ ಹಿಂದಿದ್ಯಾ ಕುತಂತ್ರ? – ಆಪ್ತರ ಬಳಿ ಸಿಎಂ ತೀವ್ರ ಅಸಮಾಧಾನ

ನವದೆಹಲಿ: ಕಾಂಗ್ರೆಸ್‌ನಲ್ಲಿ (Congress) ಡಿಸಿಎಂ ಕುರ್ಚಿ ಕದನ ಈಗ ಮುಖ್ಯಮಂತ್ರಿಯನ್ನೇ (Chief Minister) ಬದಲಿಸುವ ಮಟ್ಟಕ್ಕೆ ಜೋರು ಚರ್ಚೆ ಆಗುತ್ತಿದೆ. ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯನವರು (CM Siddaramaiah) ಸ್ವಾಮೀಜಿ ಹೇಳಿಕೆಯಿಂದ ತೀವ್ರ ಮುಜುಗರವಾದಂತೆ ಕಾಣುತ್ತಿದೆ.

ಇಂದು ಕೂಡ ಅತೃಪ್ತರ ಬಳಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ರಾಜಕೀಯದಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ನಡೆಯುತ್ತಿದ್ಯಾ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸದೇ ಲಿಫ್ಟ್ ಒಳಗೆ ತೆರಳಿದ್ದರು. ಇದನ್ನೂ ಓದಿ: ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸಂಚು: ಹೆಚ್‌ಡಿಕೆ

ಆಪ್ತರಾದ ಕೆಜೆ ಜಾರ್ಜ್, ಪರಮೇಶ್ವರ್ ಜೊತೆ ಲಿಫ್ಟ್‌ನಲ್ಲಿ ಹೋಗುವಾಗ, “ಯಾರೋ ಹೇಳಿಕೊಟ್ಟು ಮಾಡಿಸಿದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೆ ಪರಮೇಶ್ವರ್‌ ʼಹೌದುʼ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮುಂಬರುವ ಬಜೆಟ್‍ನಲ್ಲಿ ಹೆಜ್ಜಾಲ -ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಸೇರ್ಪಡೆ: ಅಶ್ವಿನಿ ವೈಷ್ಣವ್

ಡಿಕೆಶಿಗೆ ಅಧಿಕಾರ ಬಿಟ್ಟುಕೊಡುವಂತೆ ಸ್ವಾಮೀಜಿ ತುಂಬು ಮನಸ್ಸಿನಿಂದ ಹೇಳಿದ್ದಾರೋ ಅಥವಾ ಯಾರಾದರೂ ಹೇಳಿದ್ದಕ್ಕೆ ಆ ಮಾತನ್ನು ಹೇಳಿದ್ದಾರಾ ಎನ್ನುವುದು ಈಗ ಭಾರೀ ಚರ್ಚೆ ಆಗುತ್ತಿದೆ.

 

ಇದಕ್ಕೂ ಮುನ್ನ ಮಾತನಾಡಿದ್ದ ಸಿದ್ದರಾಮಯ್ಯ, ರಾಜಕಾರಣಕ್ಕೂ ಸ್ವಾಮೀಜಿಗಳಿಗೂ ಯಾವುದೇ ಸಂಬಧವಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಮಾಡುವುದು ಶಾಸಕರು, ಹೈಕಮಾಂಡ್ ಎಂದು ಹೇಳಿಕೆ ನೀಡಿದ್ದರು.