ಸಿದ್ದರಾಮಯ್ಯ ದಶಪಥ ವೀಕ್ಷಣೆಯ ಪ್ರವಾಸ ದಿಢೀರ್‌ ರದ್ದು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಗುರುವಾ ನಡೆಸಬೇಕಾಗಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಹೆದ್ದಾರಿ ವೀಕ್ಷಣೆಯ ಪ್ರವಾಸ ದಿಢೀರ್‌ ರದ್ದಾಗಿದೆ.

ಮಾರ್ಚ್ 12 ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸುವ ಮೊದಲು ಗುರುವಾರ ಸಿದ್ದರಾಮಯ್ಯ ಹೆದ್ದಾರಿ ವೀಕ್ಷಣೆ ಮಾಡಲು ಮುಂದಾಗಿದ್ದರು. ಆದರೆ ಎಐಸಿಸಿಯ (AICC) ಸ್ಕ್ರೀನಿಂಗ್ ಕಮಿಟಿ ಗುರುವಾರ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಹೆದ್ದಾರಿ ವೀಕ್ಷಣೆಯ ಪ್ರವಾಸ ರದ್ದಾಗಿದೆ.

ದಶಪಥ ರಸ್ತೆಯ ಲೋಪದೋಷಗಳನ್ನ ಪರಿಶೀಲಿಸಿ, ಅದರ ಸಮಸ್ಯೆಗಳನ್ನ ಜನರ ಮುಂದಿಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿತ್ತು. ರಸ್ತೆಯ ಪರಿಶೀಲನೆ ನಡೆಸಿ ಸಿದ್ದಲಿಂಗಪುರದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದ್ದರು.

ಇದನ್ನೂ ಓದಿ: ʼಕೃಷ್ಣಮಠದ ಜಾಗ ಕೊಟ್ಟಿದ್ದು ಮುಸ್ಲಿಮರುʼ – ಸತ್ಯಾಸತ್ಯತೆ ಏನು?

ದಶಪಥ ರಸ್ತೆ ವಿಚಾರದ ಬಗ್ಗೆ ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ಕ್ರೆಡಿಟ್‌ ವಾರ್‌ ನಡೆಯುತ್ತಿದೆ. ಯುಪಿಎ ಅವಧಿಯಲ್ಲಿ ಈ ಯೋಜನೆ ಟೇಕಾಫ್ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರೆ, ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಇದು ಮೋದಿ ಸರ್ಕಾರದ ಕೊಡುಗೆ ಎಂದು ತಿರುಗೇಟು ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಹಳೇ ಮೈಸೂರು ಭಾಗದಲ್ಲಿ ದಶಪಥ ರಸ್ತೆ ಯೋಜನೆ ಪ್ರಭಾವ ಬೀಳುವ ಪರಿಣಾಮ ಎರಡು ಪಕ್ಷಗಳ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *