ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ: ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ರಾಜರತ್ನ ಪವರ್‌ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅಭಿನಯಿಸಿರುವ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ಕೊಡಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತೇನೆ. ಬೊಮ್ಮಾಯಿಗೆ ಪುನೀತ್ ಮೇಲೆ ಪ್ರೀತಿ ಇದೆ. ಪುನೀತ್‍ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ.  ಜನಪ್ರಿಯ ನಾಯಕ ರಾಜ್‍ಕುಮಾರ್ ಅವರು ಇದ್ದಾಗ, ನನ್ನನ್ನು ನಮ್ಮ ಕಾಡಿನವರು ಅಂತ ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

ಎಲ್ಲರೂ ಜೇಮ್ಸ್ ಚಿತ್ರ ನೋಡಿ, ಪುನೀತ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ನಾನು ಸಾಮಾನ್ಯವಾಗಿ ಚಲನಚಿತ್ರಗಳನ್ನು ನೋಡಲು ಥಿಯೇಟರ್‌ಗೆ ಹೋಗಲ್ಲ. ಯಾರಾದರು ಒತ್ತಾಯ ಮಾಡಿ ಕರೆದರೆ ಹೋಗಿರುತ್ತೇನೆ. ಸ್ವಲ್ಪ ನೋಡಿ ಎದ್ದು ಬಂದಿದ್ದೂ ಇದೆ. ಜೇಮ್ಸ್ ಚಿತ್ರವನ್ನು ಟಿವಿಯಲ್ಲಿ ಬಂದಾಗ ನೋಡುತ್ತೇನೆ. ನಾನು ಈ ಹಿಂದೆ ಪುನೀತ್ ಅವರು ನಟಿಸಿದ್ದ ಚಿತ್ರ ರಾಜಕುಮಾರ ನೋಡಲು ಥಿಯೇಟರ್‌ಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

Comments

Leave a Reply

Your email address will not be published. Required fields are marked *