ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ – ಸಿದ್ದರಾಮಯ್ಯ ತಿರುಗೇಟು

ಮಂಗಳೂರು: ಬಿಹಾರ ಚುನಾವಣೆಗೆ (Bihar Election 2025) ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ ಹೇಳ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ, ಅವರು ಮಾಡಿದ್ದನ್ನು ನಮ್ಮ ಮೇಲೆ ಹೇಳ್ತಿದ್ದಾರೆ ಎಂದರು. ಇದನ್ನೂ ಓದಿ: ಬೇಗ ಮದ್ವೆ ಆಗಿ, ನಾವು ಕಾಯ್ತಿದ್ದೇವೆ – ರಾಹುಲ್‌ ಗಾಂಧಿಗೆ ಅಂಗಡಿ ಮಾಲೀಕ ಮನವಿ

ಇನ್ನೂ ಸರ್ಕಾರಿ ಜಾಗ, ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಅವರು 2013ರಲ್ಲಿ ಈ ಸುತ್ತೋಲೆ ಹೊರಡಿಸಿದ್ದರು. ಶಿಕ್ಷಣ ಇಲಾಖೆ ಮುಖಾಂತರ ಈ ಸುತ್ತೋಲೆ ಹೊರಡಿಸಲಾಗಿತ್ತು. ಯಾಕೆ ಸುತ್ತೋಲೆ ಹೊರಡಿಸಿದ್ದು? ನಾವು ಯಾವುದೇ ಆರ್ಗನೈಸೇಷನ್ ಹೆಸರು ಹೇಳಿಲ್ಲ. ನಾವು ಯಾವ ಆರ್ಗನೈಜೇಷನ್ ಹೆಸರು ಹೇಳಿದ್ದೇವೆ? ನಾವು ಆರ್‌ಎಸ್‌ಎಸ್‌ ಹೆಸರು ಹೇಳಿಲ್ಲ ಅವರು ಹೇಳಿದ್ದನ್ನೇ ನಾವು ರಿಪೀಟ್ ಮಾಡಿದ್ದೇವೆ ಎಂದು ಕುಟುಕಿದರು. ಇದನ್ನೂ ಓದಿ: ಸೈಟ್‌ ಕೊಟ್ರೆ ಮಾತ್ರ ಸಂಸಾರ, ಮಗು ಬೇಕಿದ್ರೆ ಮೈದುನನ ಜೊತೆ ಮಲಗು – ಗಂಡ, ಅತ್ತೆಯ ಟಾರ್ಚರ್‌ಗೆ ಉಪನ್ಯಾಸಕಿ ಆತ್ಮಹತ್ಯೆ

ಎನಿ ಆರ್ಗನೈಸೇಷನ್ ಅಂತ ಜಗದೀಶ್ ಶೆಟ್ಟರ್ ನಿನ್ನೆ ಹೇಳಿದ್ದಾರೆ ಅದು ಶಿಕ್ಷಣ ಇಲಾಖೆ ಮಾಡಿದ್ದು ಅಂತ. ಹಾಗಾದ್ರೆ ಅವರು ಮುಖ್ಯಮಂತ್ರಿ ಆಗಿರ್ಲಿಲ್ವಾ? ನಾವು ಹೇಳಿರೋದು ಪರ್ಮಿಷನ್ ತಕ್ಕೊಂಡು ಮಾಡ್ಲಿ ಅಂತ. ಆದ್ರೆ ಪರ್ಮಿಷನ್ ಕೊಡಲೇಬೇಕು ಅಂತ ಏನಿಲ್ಲ. ಕಾನೂನು ಸುವ್ಯವಸ್ಥೆ ನೋಡಿ ಅನುಮತಿ ಕೊಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು – 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಆರ್‌ಜೆಡಿ