ಬಾಗಲಕೋಟೆ: ತಾವು ಶಾಲಾ ದಿನಗಳ ಸಮಯದಲ್ಲಿ ಟೈರ್ ನಿಂದ ತಯಾರಿಸಿದ್ದ ಚಪ್ಪಲಿ ಧರಿಸಿ ಹೋಗುತ್ತಿದ್ದೇವು, ಈಗಿನ ಮಕ್ಕಳಿಗೆ ಇಂತಹ ತೊಂದರೆ ಆಗಬಾರದು ಎಂದು ಹೇಳಿ ಶೂ ಭಾಗ್ಯ ಯೋಜನೆ ಜಾರಿ ಮಾಡಿದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಾದಾಮಿಯಲ್ಲಿ ಪುಸ್ತಕ ಪ್ರಾಧಿಕಾರದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಟೈರ್ ಚಪ್ಪಲಿ ಪ್ರಸಂಗ ನೆನೆಸಿಕೊಂಡರು. ನಾನು ಶಾಲೆಗೆ ಹೋಗುವಾಗ ಟೈರ್ ಚಪ್ಪಲಿ ಧರಿಸುತ್ತಿದ್ದೆ. ಇಂತಹ ತೊಂದರೆ ಬರಬಾರದೆಂದು ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಜಾರಿಗೆ ತಂದಿದ್ದೇವೆ ಎಂದರು. ಇದೇ ವೇಳೆ ತಮ್ಮ ಅಧಿಕಾರ ಮತ್ತು ಸಂಪತ್ತು ಯಾವತ್ತೂ ಬಲಾಡ್ಯರ ಕೈಯಲ್ಲಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ನಾನು ಧರಿಸುತ್ತಿದ್ದ ಟೈರ್ ಚಪ್ಪಲಿ ಮೂರು ವರ್ಷ ಆದ್ರು ಹರಿದಿರಲಿಲ್ಲ ಎಂದು ನಗೆಚಟಾಕಿ ಹಾರಿಸಿದರು.

ಬಾದಾಮಿಯ ಕನಕ ಜಯಂತಿ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ಅವರು ಸ್ವತಃ ಡೋಲು ಬಾರಿಸಿ ಗಮನ ಸೆಳೆದರು. ಆದರೆ ಆ ವೇಳೆ ಡೋಲು ಬಾರಿಸುವ ಕೋಲಿನ ಸಿಬಿರು ಚುಚ್ಚಿ ಸಿದ್ದರಾಮಯ್ಯ ಅವರ ಬೆರಳಿಗೆ ಗಾಯವಾಯಿತು. ಕೂಡಲೇ ಎಚ್ಚೆತ್ತ ಕಾರ್ಯಕರ್ತರು ಬೆರಳಿಗೆ ಚುಚ್ಚಿದ್ದ ಸಿಬಿರು ತೆಗೆದು ಪ್ರಥಮ ಚಿಕಿತ್ಸೆ ನೀಡಿದರು.
ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಈ ವೇಳೆ ಸಿದ್ದರಾಮಯ್ಯನವರಿಗೆ ಮೈತ್ರಿ ಸರ್ಕಾರ ನಡೆಸುವ ಉದ್ದೇಶ ಇಲ್ಲ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ಅವರು, ಹೊರಟ್ಟಿ ಹೇಳಿಕೆ ಕೊಟ್ಟಿದ್ದರೆ ತೋರಿಸಿ ಎಂದು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡದೆ ತೆರಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply