ಇದು ಸಬ್ಕಾ ನಾಶ್ ಬಜೆಟ್: ಸಿದ್ದರಾಮಯ್ಯ

– ಮೋದಿ ಅವರ ಕಾಲದಲ್ಲಿ ಈ ದೇಶ ಮಾರಾಟ ಮಾಡಲಾಗುತ್ತದೆ

ಮೈಸೂರು: ಇಂದು ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಜನರ ನಿರೀಕ್ಷೆಗೆ ಸ್ಪಂದಿಸುವ ಮತ್ತು ಪ್ರಗತಿಗೆ ಪೂರಕವಾದ ಬಜೆಟ್ ಅಲ್ಲ. ದೇಶ ವಿನಾಶ ಮಾಡುವ ಬಜೆಟ್ ಇದಾಗಿದ್ದು, ಇದು ಸಬ್ಕಾ ನಾಶ್ ಬಜೆಟ್, ಜನರ ನಂಬಿಕೆಗೆ ದ್ರೋಹ ಮಾಡುವ ಬಜೆಟ್, ಮೋದಿ ಅವರ ಮುಂದೆ ರಾಜ್ಯ ಸರ್ಕಾರ ಹೇಡಿ ಥರ ಕೂರುತ್ತದೆ. ಕರ್ನಾಟಕಕ್ಕೆ ಯಾವುದೆ ಲಾಭವಿಲ್ಲ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನ ಎಚ್.ಡಿ. ಕೋಟೆಯ ಕಬಿನಿ ಹಿನ್ನಿರಿನ ರೆಸಾರ್ಟ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬಜೆಟ್ ಬಗ್ಗೆ ನಾನು ತುಂಬಾ ನಿರೀಕ್ಷೆ ಇಟ್ಟು ಕೊಂಡಿರಲಿಲ್ಲ. ಜನ ಸಾಮಾನ್ಯರು ತುಂಬ ನಿರೀಕ್ಷೆ ಇಟ್ಟು ಕೊಂಡಿದ್ದರು, ಅವರ ನಿರೀಕ್ಷೆ ಈಡೇರಿಲ್ಲ. 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಕಳೆದ ವರ್ಷ ಮಂಡಿಸಿದ್ದರು. ಈ ವರ್ಷ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. 4ಲಕ್ಷದ 61 ಸಾವಿರ ಕೋಟಿ ರೂಪಾಯಿ ಹೆಚ್ಚಳದ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.

11 ಲಕ್ಷದ 87ಸಾವಿರ 180 ಕೋಟಿ ಸಾಲ ಮಾಡುತ್ತಿದ್ದಾರೆ. ಕಳೆದ ವರ್ಷ 135 ಲಕ್ಷ 87 ಸಾವಿರ ಕೋಟಿ ರೂಪಾಯಿ ಸಾಲ ಇತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 53 ಲಕ್ಷ 11 ಸಾವಿರ ಕೋಟಿ ಸಾಲ ಇತ್ತು. ಈಗ ಮಾಡುವ ಸಾಲ ಸೇರಿದರೆ 8 ವರ್ಷದಲ್ಲಿ 93ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ಬಜೆಟ್ ಕುರಿತಾಗಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕೋಟಿಗಟ್ಟಲೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ: ತೇಜಸ್ವಿ ಸೂರ್ಯ

ಮೋದಿ ಅವರ ಅವಧಿಯಲ್ಲಿ ದೇಶ ಸಾಲದ ಸುಳಿಗೆ ಸಿಲುಕುತ್ತಿದೆ. 9ಲಕ್ಷದ 40 ಸಾವಿರ ಕೋಟಿ ವಾರ್ಷಿಕ ಬಡ್ಡಿ ಕಟ್ಟ ಬೇಕಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಗೆ 38ಸಾವಿರ ಕೋಟಿ ಕಡಮೆ ಹಣ ಇಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉದ್ಯೋಗ ಖಾತ್ರಿಗೆ ಹೆಚ್ಚು ಹಣ ಇಡಬೇಕಿತ್ತು. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿಲ್ಲ. ಕೋವಿಡ್ ಇರುವ ವೇಳೆ ಈ ಕ್ಷೇತ್ರಕ್ಕೆ ಹೆಚ್ಚು ಹಣ ಕೊಡಬೇಕಿತ್ತು. ಮೋದಿ ಕಾಲದಲ್ಲಿ ದೇಶ ಸುಭಿಕ್ಷವಾಗಿದೆ ಎಂದು ಬಿಜೆಪಿ ಹೇಳುತ್ತಿರುವುದು ಸುಳ್ಳು ಎಂದು ಆಡಳಿತ ಪಕ್ಷದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

ರಸಗೊಬ್ಬರದ ಸಬ್ಸಿಡಿಯನ್ನೆ ಕಡಮೆ ಮಾಡಿದ್ದಾರೆ. ಗೊಬ್ಬರದ ಬೆಲೆ ಜಾಸ್ತಿ ಆಗುವ ಮುನ್ಸೂಚನೆ ಬಜೆಟ್‍ನಲ್ಲಿ ಕಾಣುತ್ತಿದೆ. ವಾಜಪೇಯಿ ಕಾಲದಲ್ಲಿ ನದಿ ಜೋಡಣೆ ಮಾಡುತ್ತೇವೆ ಅಂತಾ ಹೇಳಿದ್ದರು, ಈಗ ಮತ್ತೆ ಅದನ್ನೆ ಹೇಳುತ್ತಿದ್ದಾರೆ. ಕರ್ನಾಟಕದ ನೀರಾವರಿ ಯೋಜನೆಗಳು ಹಾಗೇ ನೆನೆಗುದಿಗೆ ಬಿದ್ದಿವೆ. ಕರ್ನಾಟಕದ ನೀರಾವರಿ ಯೋಜನೆಗಳು ಹಾಗೇ ನೆನೆಗುದಿಗೆ ಬಿದ್ದಿವೆ. ಬಜೆಟ್ ಅಂದರೆ ದೇಶದ ಆದ್ಯತೆಗಳೇನೂ ಎಂಬುದು ಸ್ಪಷ್ಟವಾಗಿರಬೇಕು. ಆದರೆ ಆದ್ಯತೆಯೆ ಕಾಣುತ್ತಿಲ್ಲ ಎಂದಿದ್ದಾರೆ.

Comments

Leave a Reply

Your email address will not be published. Required fields are marked *