ಉಕ್ರೇನ್-ರಷ್ಯಾ ಸಂಘರ್ಷ, ಕೇಂದ್ರ ಸರ್ಕಾರದ ಮೇಲಷ್ಟೆ ಜವಾಬ್ದಾರಿ ವಹಿಸಿ ಬಿಟ್ಟು ಬಿಡಬಾರದು: ಸಿದ್ದರಾಮಯ್ಯ

Siddaramaiah

ಬೆಂಗಳೂರು: ಉಕ್ರೇನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಉಕ್ರೇನ್-ರಷ್ಯಾ ನಡುವಿನ ಸಂಘರ್ಷದಿಂದಾಗಿ ಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಜನರನ್ನು ಮುಖ್ಯವಾಗಿ ವಿದ್ಯಾರ್ಥಿಗಳನ್ನು ವಾಪಸು ಕರೆತರಲು ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬದವರನ್ನು ಸಂಪರ್ಕಿಸಿ ಅವರಲ್ಲಿ ಭರವಸೆ ತುಂಬಬೇಕು. ಉಕ್ರೇನ್-ರಷ್ಯಾ ಸಂಘರ್ಷ ಅಂತಾರಾಷ್ಟ್ರೀಯ ವಿದ್ಯಮಾನವಾಗಿರುವ ಕಾರಣ ಕೇಂದ್ರ ಸರ್ಕಾರದ ನೆರವು-ಸಹಕಾರ ಅಗತ್ಯವಾದರೂ ಅವರ ಮೇಲಷ್ಟೆ ಜವಾಬ್ದಾರಿ ವಹಿಸಿ ಬಿಟ್ಟು ಬಿಡಬಾರದು. ಈ ಬಿಕ್ಕಟ್ಟು ಪರಿಹಾರವಾಗುವ ವರೆಗೆ ಇದರ ನಿರ್ವಹಣೆಗೆ ಮುಖ್ಯಮಂತ್ರಿಗಳು ವಿಶೇಷ ಅಧಿಕಾರಿಯನ್ನು ನೇಮಿಸಬೇಕು ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಸರ್ಕಾರ ವೆಬ್ ಪೋರ್ಟಲ್ ಪ್ರಾರಂಭಿಸಿದೆ.  http://ukraine.karnataka.tech/stranded ಈ ವೆಬ್ ಪೋರ್ಟಲ್ ಮೂಲಕ ಮಾಹಿತಿಗಳನ್ನ ಅಪ್ ಲೋಡ್ ಮಾಡಬಹುದಾಗಿದೆ. ಉಕ್ರೇನ್‍ನಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿದ ನೋಡಲ್ ಅಧಿಕಾರಿ ಮನೋಜ್ ರಾಜನ್, ಸಿಎಂ ಸೂಚನೆ ಮೇಲೆ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆ ರಾತ್ರಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ. 281 ಕನ್ನಡಿಗರ 27 ಜಿಲ್ಲೆಗಳ ವಿದ್ಯಾರ್ಥಿಗಳು ರಿಪೋರ್ಟ್ ಆಗಿದ್ದಾರೆ. ಅವರು ನಮಗೆ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ನಾವು ಕೇಂದ್ರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರದ 7 ಮಂದಿ ವಿದ್ಯಾರ್ಥಿಗಳ ಪರದಾಟ

ಬೆಳಗಿನ ಜಾವ 6 ಗಂಟೆಯಲ್ಲಿ ನಡೆದಿರೋ ದಾಳಿಯ ಕುರಿತಾಗಿ ವಿದ್ಯಾರ್ಥಿಗಳ ಮಾಹಿತಿ ಪಡೆಯಲು ಆ್ಯಪ್ ಪ್ರಾರಂಭ ಮಾಡಿದ್ದೇವೆ. ಈ ಆ್ಯಪ್‌ನಲ್ಲಿ ವಿದ್ಯಾರ್ಥಿಗಳು ಮಾಹಿತಿ ಕೊಡಬಹುದು. ವಿದ್ಯಾರ್ಥಿಗಳು ಮಾಹಿತಿ ಅಪ್ ಲೋಡಬೇಕು. ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಕೊಟ್ಟ ಬಳಿಕ ಅವರ ಮಾಹಿತಿ ಕೇಂದ್ರ ಸರ್ಕಾರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೆ ಕೊಡುತ್ತೇವೆ. ವಿದ್ಯಾರ್ಥಿಗಳ ರಕ್ಷಣೆಗಾಗಿ ನಾವು ಕ್ರಮವಹಿಸಿದ್ದೇವೆ. ಪೋಷಕರು ಆತಂಕ ಪಡುವುದು ಬೇಡ. ನಾವು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳು ವೆಬ್ ಫೋರ್ಟ್‍ನಲ್ಲಿ ಸರಳವಾಗಿ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *