ಮೇಕೆದಾಟುಗಾಗಿ ಕರೆದಿರುವ ಸರ್ವಪಕ್ಷ ಸಭೆಗೆ ನೋಟಿಸ್ ಬಂದ ಮೇಲೆ ತೀರ್ಮಾನ: ಸಿದ್ದರಾಮಯ್ಯ

ಧಾರವಾಡ: ಮೇಕೆದಾಟುಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿರುವ ಸರ್ವ ಪಕ್ಷ ಸಭೆಗೆ ನೋಟಿಸ್ ಬಂದ ಮೇಲೆ ಸಭೆಗೆ ಹೋಗಬೇಕೋ ಬೇಡವೋ ಎಂಬ ತಿರ್ಮಾನ ಮಾಡ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪ್ರಾಜೆಕ್ಟ್ ಆರಂಭ ಮಾಡಿದ್ದ ನಾವು. ಡಿಪಿಆರ್ ಮಾಡಿದ್ದ, ಸಿಪಿಸಿ ಕೊಟ್ಟಿದ್ದು ನಮ್ಮ ಕಾಲದಲ್ಲಿ. ಇವತ್ತು ಅದು ಪೆಂಡಿಂಗ್ ಇರುವುದು ಅರಣ್ಯ ಹಾಗೂ ಪರಿಸರದ ಅನುಮತಿ ಸಿಗದೇ ಇರುವುದಕ್ಕೆ. ಅದನ್ನು ಈ ಸರ್ಕಾರ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರಕಾರವೇ ಇದೆ. ಇವರು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದರು.

ಈ ಕಾರ್ಯಕ್ಕೆ ತಮಿಳುನಾಡಿಗೆ ಅಡ್ಡಿಪಡಿಸಲು ರೈಟ್ ಇಲ್ಲ. ಪರಿಸರ ಕ್ಲೆರೆನ್ಸ್ ಕೊಟ್ಟರೆ ಕೆಲಸ ಆರಂಭ ಮಾಡಬಹುದು. ಇವರು ಅಲ್ಲಿ ಗಟ್ಟಿಯಾಗಿ ಕೇಳಿ ತಗೊಂಡಿಲ್ಲ, ಅವರು ಕೊಟ್ಟಿಲ್ಲ. ಕೇಂದ್ರದವರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಅವರ ಶಕ್ತಿ ವೃದ್ಧಿ ಮಾಡಿಕೊಳ್ಳಲು ಕೊಡ್ತಾ ಇಲ್ಲ. ಇವರು ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದಾರೆ. ಇದು ಕುಡಿಯುವ ನೀರಿನ ಪ್ರಾಜೆಕ್ಟ್. ಸುಪ್ರಿಂಕೋರ್ಟ್ ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ಎಂದಿದ್ದಾರೆ. ಇದನ್ನೂ ಓದಿ: ಅರ್ಧಶತಕ ಸಿಡಿಸಿ ಮಗಳಿಗೆ ಸಮರ್ಪಿಸಿದ ಕೊಹ್ಲಿ

ಯಾಕೆ ಇವರು ಅರಣ್ಯ ಕ್ಲೆರೆನ್ಸ್ ವಿಳಂಬ ಮಾಡುತ್ತಿದ್ದಾರೆ. ಇವರು ಯಾಕೆ ತಗೊಂಡಿಲ್ಲ. ತಗೊಂಡು ಆರಂಭ ಮಾಡಿ, ಇದರಿಂದ ಬೆಂಗಳೂರು ಸುತ್ತಮುತ್ತ, ಕೋಲಾರ, ರಾಮನಗರ ಸೇರಿ ಹಲವು ಜಿಲ್ಲೆಗಳಿಗೆ ನೀರು ಸಿಗುತ್ತೆ. ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದರು.

Comments

Leave a Reply

Your email address will not be published. Required fields are marked *