50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

ಬೆಂಗಳೂರು: ಎಐಸಿಸಿ ಒಬಿಸಿ ಸಲಹಾ ಮಂಡಳಿ (AICC OBC Advisory Council) ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮಂಡಿಸಿದ ಮೊದಲ ನಿರ್ಣಯದಲ್ಲೇ ಮೀಸಲಾತಿ ಹೆಚ್ಚಳ ಪ್ರಸ್ತಾಪ ಮಾಡಿದ್ದಾರೆ. ಬೆಂಗಳೂರು ಡಿಕ್ಲರೇಶನ್ (Bengaluru Declaration) ಹೆಸರಿನ ನಿರ್ಣಯದಲ್ಲಿ ಪ್ರಸ್ತುತ ಇರುವ ಒಟ್ಟಾರೆ ಮೀಸಲಾತಿ ಮಿತಿ 50% ತೆಗೆದು, 75%ಗೆ ಹೆಚ್ಚಳ ಮಾಡುವ ಹೋರಾಟಕ್ಕೆ ನಿರ್ಣಯ ಕೈಗೊಂಡಿದ್ದಾರೆ.

ಈ ಮೂಲಕ ಒಬಿಸಿ ವರ್ಗಕ್ಕೂ ಅದರ ಸೌಲಭ್ಯ ಸಿಗಬೇಕು. ತೆಲಂಗಾಣ ಮಾದರಿಯಲ್ಲಿ ರಾಷ್ಟ್ರೀಯ ಜಾತಿಗಣತಿ ಆಗಬೇಕು. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಮೀಸಲಾತಿ ಕಲ್ಪಿಸಬೇಕೆಂದು ಸಿದ್ದರಾಮಯ್ಯ ಅವರು ಮಂಡಿಸಿದ ಬೆಂಗಳೂರು ಡಿಕ್ಲರೇಶನ್ ನಿರ್ಣಯಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

ಇದೇ ವೇಳೆ ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಸಭೆಯಲ್ಲಿ ರಾಹುಲ್ ಗಾಂಧಿಗೆ ನ್ಯಾಯಯೋಧ ಬಿರುದು ನೀಡಿ, ಜಾತಿಗಣತಿ ರಾಹುಲ್ ಹೋರಾಟದ ಫಲ ಎಂದು ಅಭಿನಂದಿಸಿದ್ದಾರೆ. ಒಟ್ಟು 3 ನಿರ್ಣಯಗಳನ್ನ ಅಂಗೀಕರಿಸಲಾಗಿದೆ. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಪ್ರಮುಖ 3 ನಿರ್ಣಯಗಳು ಯಾವುವು?

ನಿರ್ಣಯ-1: ಬೆಂಗಳೂರು ಡಿಕ್ಲರೇಶನ್, ಸಿದ್ದರಾಮಯ್ಯ ಮಂಡನೆ
* ರಾಹುಲ್ ಗಾಂಧಿಗೆ ನ್ಯಾಯಯೋಧ ಬಿರುದು, ಜಾತಿಗಣತಿಗೆ ಮೋದಿ ಶರಣಾಗತಿ, ಸರ್ವರಿಗೂ ನ್ಯಾಯ ರಾಷ್ಟ್ರವ್ಯಾಪಿ ಕ್ಯಾಂಪೇನ್
* ರಾಷ್ಟ್ರದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಸ್ಥಿತಿ ಬಗ್ಗೆ ತೆಲಂಗಾಣ ಮಾದರಿಯಲ್ಲಿ ಜಾತಿಗಣತಿ ಆಗಬೇಕು.
* ಒಟ್ಟು ಮೀಸಲಾತಿ ಮಿತಿ 50%ನಿಂದ 75%ಗೆ ಹೆಚ್ಚಳ ಮಾಡಬೇಕು. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಟಿಕಲ್ 15(5) ಪ್ರಕಾರ ಮೀಸಲಾತಿ ನೀಡಬೇಕು. ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ನಿರ್ಣಯ-2: ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮಂಡನೆ
* ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ಒಬಿಸಿ ನಾಯಕತ್ವ ಭಾಗೀದಾರಿ ನ್ಯಾಯ ಸಮ್ಮೇಳನ
* ಜುಲೈ 25ಕ್ಕೆ ತಾಲ್ ಕಟೋರಾ ಸ್ಟೇಡಿಯಂನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಒಬಿಸಿ ಸಮಾವೇಶ
* ಆ ಸಮಾವೇಶದಲ್ಲಿ ರಾಷ್ಟ್ರೀಯ ಜಾತಿಗಣತಿ ಬಗ್ಗೆ ಡೆಡ್‌ಲೈನ್, ಟೈಮ್‌ಲೈನ್‌ಗೆ ಆಗ್ರಹಿಸಲಿರುವ ಕಾಂಗ್ರೆಸ್. ಇದನ್ನೂ ಓದಿ: ಫ್ರೀ ಬಸ್ ಎಫೆಕ್ಟ್ – ಉಸಿರುಗಟ್ಟಿ ಕಾಪಾಡಿ ಎಂದು ಕೂಗಿಕೊಂಡ ಮಹಿಳೆ

ನಿರ್ಣಯ -3: ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಅನಿಲ್ ಜೈ ಹಿಂದ್ ಮಂಡನೆ
* ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿ ನಿರ್ಣಯ
* ಎಐಸಿಸಿ ಒಬಿಸಿ ಮಂಡಳಿಯ ಮೊಟ್ಟಮೊದಲ ಸಭೆಯ ನೇತೃತ್ವ ವಹಿಸಿಕೊಂಡು ಮುನ್ನಡೆಸಿದ್ದಕ್ಕೆ ಅಭಿನಂದನಾ ನಿರ್ಣಯ