ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಕೊಲೆ ಆಗಬಹುದು: ಕೆ.ಎಸ್.ಈಶ್ವರಪ್ಪ

ವಿಜಯಪುರ: ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುತ್ತಾರೆ ಎನ್ನುವ ಭಯ ನನಗೆ ಕಾಡುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಾಯುಕ್ತರ ಮೇಲೆ ಚಾಕು ಇರಿತ ಆಗಿದೆ. ಹೀಗಾಗಿ ಇಂದು ಸಂಜೆಯೊಳಗೆ ಸಿದ್ದರಾಮಯ್ಯ ಅವರಿಗೆ ಚಾಕು ಹಾಕಬಹುದು. ಇಲ್ಲವೇ ಕೊಲೆ ಮಾಡಬಹುದು ಎನ್ನುವ ಭಯ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.

ಕೊಲೆಗಡುಕರಿಗೆ ಕರ್ನಾಟಕ ಒಂದು ಸ್ವರ್ಗ ಆಗಿದೆ. ಯಾರು ಏನು ಮಾಡಲಿಕ್ಕೆ ಆಗುವುದಿಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಸಿಎಂ ಹಾಗೂ ಗೃಹ ಮಂತ್ರಿಗಳ ಜೀವ ಉಳಿಸುವುದು ಕಷ್ಟ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.

ಗೃಹ ಮಂತ್ರಿ ಮತ್ತು ಮುಖ್ಯಮಂತ್ರಿ ನಮ್ಮ ಜೀವ ಉಳಿಸಿ ಇಂತಹ ಕೊಲೆಕಡುಕರರನ್ನು ನಿಯಂತ್ರಿಸಲು ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಅವರು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *