ಸರ್..ಒಂದು ಸೆಲ್ಫಿ ಪ್ಲೀಸ್..! – ಮಾಜಿ ಸಿಎಂ ಜೊತೆ ಸೆಲ್ಫಿಗಾಗಿ ಹೆಂಗಳೆಯರ ಪರದಾಟ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿ ಹೋದರು ತಮ್ಮ ಜೊತೆಗಿನ ಸೆಲ್ಫಿಗಾಗಿ ಮಹಿಳೆಯರು ಮುಗಿಬೀಳುತ್ತಾರೆ. ಹಾಗೆಯೇ ವಸಂತನಗರದಲ್ಲೂ ಸಿದ್ದರಾಮಯ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೆಂಗಳೆಯರು ಪರದಾಡಿದ್ದಾರೆ.

ಇಂದು ವಸಂತನಗರದ ದೇವರಾಜು ಅರಸು ಸಭಾಂಗಣದಲ್ಲಿ ಕರ್ನಾಟಕ ಅಹಲ್ಯ ಬಾಯಿ ಹೋಳ್ಕರ್ ಮಹಿಳಾ ಸಂಘ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಮಹಿಳಾ ಜಾಗೃತಿ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆಯೇ ಮಹಿಳೆಯರು ಸೆಲ್ಫಿಗಾಗಿ ನಾ ಮುಂದು.. ತಾ ಮುಂದು ಎಂದು ಮುಗಿಬಿದ್ದರು.

ಸಭಾಂಗಣದಲ್ಲಿ ಸಿದ್ದರಾಮಯ್ಯ ಕೂತಿದ್ದ ಕಡೆಗೆ ಹೋಗಿ ಸರ್.. ಒಂದು ಸೆಲ್ಫಿ ಪ್ಲೀಸ್.. ಎಂದು ನೂಕುನುಗ್ಗಲಿನಂತೆ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಣ್ಣು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಪ್ಪು ಕನ್ನಡಕ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಾಲ್ಕು ದಿನಗಳಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೇದಿಕೆ ಮೇಲೆ ಬಂದ ನಂತರ ಸಿದ್ದರಾಮಯ್ಯ ಕನ್ನಡಕ ಬದಲಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಚಿವ ಶಂಕರ್ ಹಾಗೂ ಮಾಜಿ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಮತ್ತು ಈಶ್ವರ ನಂದಾಪುರಿ ಸ್ವಾಮಿಜಿ ಕೂಡ ಉಪಸ್ಥಿತಿತರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *