ಬಿಜೆಪಿಯವರು ಮೋದಿ ಮುಖ ನೋಡಿ ಓಟ್ ಹಾಕಿ ಅಂತಾರೆ – ಸದಾನಂದಗೌಡರು ಬುರ್ಖಾ ಹಾಕ್ಕೊಂಡು ಬರಲಿ: ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ಬಿಜೆಪಿ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ನಮ್ಮ ಮುಖ ನೋಡಬೇಡಿ. ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಓಟ್ ಹಾಕಿ ಅಂತಿದ್ದಾರೆ. ಅದ್ದರಿಂದ ಸದಾನಂದನಂದ ಗೌಡರು ಬುರ್ಖಾ ಹಾಕಿಕೊಂಡು ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಬೆಂಬಲಿತ ಅಭ್ಯರ್ಥಿ ಕೃಷ್ಣ ಭೈರೇಗೌಡ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಆಪ್ತರ ಮನೆ ಮೇಲೆ ರಾಜಕೀಯ ದುರುದ್ದೇಶದಿಂದ ಐಟಿ ದಾಳಿ ಮಾಡುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಯಾಕೆ ದಾಳಿ ಮಾಡುತ್ತಾರೆ? ಚುನಾವಣೆ ಇಲ್ಲದಿದ್ದಾಗ ಐಟಿ ದಾಳಿ ಮಾಡಿ. ಅವರ ಮನೆಯಲ್ಲಿ ಆರು ಕೋಟಿ ಸಿಕ್ಕಿದ್ದರೆ ಅದಕ್ಕೆ ಲೆಕ್ಕ ಅವರೇ ಕೊಡುತ್ತಾರೆ. ಬಿಜೆಪಿಯವರ ಬಳಿ ದುಡ್ಡಿಲ್ವಾ? ಅವರ ಮನೆ ಮೇಲೆ ದಾಳಿ ಮಾಡಲಿ. ಏಕೆ ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಮಾಡಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಮತ್ತೆ ಮೋದಿ ಅಧಿಕಾರಕ್ಕೆ ಬರಬಾರದು. ಅಲ್ಪಸಂಖ್ಯಾತರು, ಮಹಿಳೆಯರು, ದುರ್ಬಲರು ಆತಂಕದಿಂದ ಬದುಕುತ್ತಿದ್ದಾರೆ. ಬಿಜೆಪಿ ನಾಯಕರಾ ಸುರೇಶ್ ಕುಮಾರ್ ಇಂದು ಸಂವಿಧಾನ ಪರ ಇದ್ದೀವಿ ಎಂದು ಹೇಳುತ್ತಾರೆ. ಆದರೆ ನಿಮ್ಮದೇ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುತ್ತಾರೆ. ಇದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆ ಮಾಡಿದರು.

ಸೂರ್ಯ ಅಲ್ಲ, ಅಮಾವಾಸ್ಯೆ: ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದನಲ್ಲ ತೇಜಸ್ವಿ ಸೂರ್ಯ ಅವನನ್ನು ಸೂರ್ಯ ಅಂತ ಕರೆಯಬಾರದು. ಅಮಾವಾಸ್ಯೆ ಎಂದು ಕರೆಯಬೇಕು. ಇನ್ನು ಕಣ್ಣೆ ಬಿಡದ ತೇಜಸ್ವಿ ಸೂರ್ಯ ಸಂವಿಧಾನ ಸುಟ್ಟು ಹಾಕಿ, ಅಂಬೇಡ್ಕರ್ ಮೂರ್ತಿ ಧ್ವಂಸ ಮಾಡಿ ಎಂದು ಹೇಳುತ್ತಾನೆ. ಅದ್ದರಿಂದ ಮೋದಿ ಮತ್ತೆ ಪ್ರಧಾನಿ ಆಗಬಾರದು. ಮೋದಿ ಪ್ರಧಾನಿ ಆದರೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲ್ಲ. ಮೋದಿ ಪ್ರಧಾನಿಯಾದರೆ ಮತ್ತೆ ಚುನಾವಣೆ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ ಎಂದರು.

ಸಚಿವ ಕೃಷ್ಣಭೈರೇಗೌಡ ಪರ ಪ್ರಚಾರ ನಡೆಸಿದ ಸಮಾವೇಶದಲ್ಲಿ ಸಚಿವ ಜಮೀರ್ ಅಹಮದ್, ಶಾಸಕರಾದ ಬೈರತಿ ಬಸವರಾಜು, ರಾಜ್ಯಸಭೆ ಸದಸ್ಯ ಕೆ ಸಿ ರಾಮಮೂರ್ತಿ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಮೈತ್ರಿ ನಾಯಕರು ಹಾಜರಿದ್ದರು.

Comments

Leave a Reply

Your email address will not be published. Required fields are marked *