ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ್ರೂ ವೋಟ್ ಬಿದ್ದಿಲ್ಲ- ದರ್ಶನ್ ಪ್ರಚಾರಕ್ಕೆ ಜಿಟಿಡಿ ಟಾಂಗ್

ಮಂಡ್ಯ: ಜನರು ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಸಿನಿಮಾ ನೋಡಿ ಅಲ್ಲ. ದರ್ಶನ್ ಪ್ರಚಾರಕ್ಕೆ ಬಂದರೂ ವೋಟ್ ಬರಲ್ಲ ಎಂದು ಸಚಿವ ಜಿಟಿ ದೇವೇಗೌಡ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಮಳವಳ್ಳಿಯ ಹೆಬ್ಬಕವಾಡಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಸ್ಟಾರ್ ನಟರಾದ ಯಶ್ ಹಾಗೂ ದರ್ಶನ್ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಅವರು ಸುಮ್ಮನೆ ಒಂದು ಕಾರ್ಯಕ್ರಮಕ್ಕೆ ಬಂದರೂ ಜನರು ಅವರನ್ನು ನೋಡಲು ಬರುತ್ತಾರೆ. ಯಶ್ ಬಂದರೂ ಜನ ಬರುತ್ತಾರೆ. ಜನರು ಅವರ ಪ್ರಚಾರದ ವೇಳೆ ಬಂದ ಮಾತ್ರಕ್ಕೆ ವೋಟ್ ಬರಲ್ಲ. ಈ ಹಿಂದೆ ದರ್ಶನ್ ಚಾಮುಂಡೇಶ್ವರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ್ದರು. ಆಗ ಒಂದು ವೋಟ್ ಕೂಡ ಬಿದ್ದಿರಲಿಲ್ಲ. ಜನ ಸಿನಿಮಾ ನೋಡಿ ವೋಟ್ ಹಾಕಲ್ಲ, ಅಭಿವೃದ್ಧಿ ನೋಡಿ ಹಾಕ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೆದರಬೇಡಿ ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲುತ್ತೆ. ಜನರು ಕರ್ನಾಟಕ ರಾಜಕೀಯದಲ್ಲಿ ಸಿನಿಮಾ ನಟರನ್ನ ಗೆಲ್ಲಿಸುವ ಕೆಲಸ ಮಾಡಿಲ್ಲ. ವರ್ಷದಲ್ಲಿ ಮಂಡ್ಯ ಇಂಡಿಯಾದಲ್ಲೇ ನಂಬರ್ 1 ಆಗುತ್ತೆ. ಜೆಡಿಎಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *