ಕಾಂಗ್ರೆಸ್ ಸಚಿವರಿಗೆ ಮಾಜಿ ಸಿಎಂರಿಂದ ಔತಣಕೂಟ

ಬೆಂಗಳೂರು: ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಧಾನದ ಬೆನ್ನಲ್ಲೇ ಮಾಜಿ ಸಿಎಂ  ಕಾಂಗ್ರೆಸ್ ಸಚಿವರಿಗೆ ಔತಣಕೂಟ ಏರ್ಪಡಿಸಿರುವುದು ಭಾರೀ ಕೂತುಹಲ ಮೂಡಿಸಿದೆ.

ಹೌದು. ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ನಡುವೆ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಅಸಮಾಧಾನದ ಬೆನ್ನಲ್ಲೇ ಕೈ ಸಚಿವರ ಔತಣಕೂಟ ಭಾರೀ ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯನವರು ನಗರದ ಕಾವೇರಿ ನಿವಾಸದಲ್ಲಿ ಔತಣಕೂಟವನ್ನು ಏರ್ಪಡಿಸಿದ್ದು, ಈ ಭೋಜನಕೂಟದಲ್ಲಿಯೇ ಉಸ್ತುವಾರಿ ನೇಮಕದಲ್ಲಿನ ಅಸಮಾಧಾನ, ಉತ್ತರ ಕರ್ನಾಟಕ ವಿವಾದ ಹಾಗೂ ವರ್ಗಾವಣೆಯಲ್ಲಿನ ಗೊಂದಲಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಎಂದು ಹೇಳಲಾಗಿದೆ.

 

ಈಗಾಗಲೇ ಕಾವೇರಿ ನಿವಾಸಕ್ಕೆ ಸಚಿವರುಗಳಾದ ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ವೆಂಕಟರಮಣಪ್ಪ, ರಮೇಶ್ ಜಾರಕಿಹೊಳಿ, ಜಮೀರ್ ಅಹಮದ್, ಶಂಕರ್, ಜಯಮಾಲಾ, ಕೃಷ್ಣಭೈರೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *