ಒಂದೇ ವೇದಿಕೆಯಲ್ಲಿ ಮಾಜಿ ಸಿಎಂಗಳ ಸಮಾಗಮ

ಮೈಸೂರು: ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೈಸೂರಿನ ಸುತ್ತೂರಿನಲ್ಲಿ ನಡೆದ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ವಿರೋಧಿಗಳು ಪರಸ್ಪರ ಹಸ್ತಲಾಘವ ಮಾಡಿಕೊಂಡು ಕುಶಲೋಪರಿ ವಿಚಾರಿಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇವತ್ತು ನಾನು ಯಡಿಯೂರಪ್ಪನವರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದೇವೆ. ಪರಸ್ಪರ ವಿರೋಧವಾಗಿರುವ ಎರಡು ಪಕ್ಷದವರು ಸೇರಿದ್ದರಿಂದ ಇದೇ ಒಂದು ದೊಡ್ಡ ಸುದ್ದಿಯಾಗುತ್ತದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ಇಬ್ಬರು ಭೇಟಿಯಾಗಿದ್ದೀವಿ. ಆಗ ಪತ್ರಿಕೆಗಳಲ್ಲಿ ರಾಜಕೀಯ ಮಾತನಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅಂದು ಕೂಡ ಚೆನ್ನಾಗಿದ್ದೀರಾ ಎಂದು ಮಾತನಾಡಿಸಿದ್ದೀವಿ. ಇಂದು ಭೇಟಿಯಾದಾಗ ನೀವು ಚೆನ್ನಾಗಿದ್ದೀರಾ ಎಂದು ಮಾತನಾಡಿಸಿದೆ. ದೇವರಾಜ ಅರಸು ಅವರು ಹೇಳುವಂತೆ ರಾಜಕೀಯದಲ್ಲಿ ಯಾರು ಮಿತ್ರರಲ್ಲ ಶತ್ರುವಲ್ಲ ಎಂದು ಹೇಳಿದರು.

ಹುಬ್ಬಳ್ಳಿಯ ಭೇಟಿ ಬಳಿಕ ಯಡಿಯೂರಪ್ಪರ ಜೊತೆಗಿನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಹಾಕಿಕೊಂಡು, ರಾಜಕೀಯ ಜೀವನದ ಹೊರತಾಗಿ ಯಡಿಯೂರಪ್ಪನವರು ಮತ್ತು ನಾನು ಒಳ್ಳೆಯ ಗೆಳೆಯರು. ಇಲ್ಲಿ ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ, ಕೊನೆಗೊಂದು ದಿನ ಗೆಲ್ಲುವುದು ನಮ್ಮ ನಡುವಿನ ಮಾನವೀಯ ಸಂಬಂಧಗಳು ಮಾತ್ರ. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಕ್ಷಣ ಎಂದು ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *