ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

ಬಾಗಲಕೋಟೆ: ಸಿದ್ದಗಂಗಾ ಶ್ರೀಗಳಿಗೆ ವಯೋಮಾನದ ದೃಷ್ಟಿಯಿಂದ ನೆನಪಿನ ಶಕ್ತಿ ಉಳಿದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿಗಳ ಜ್ಞಾಪಕ ಶಕ್ತಿಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳ ಪಕ್ಕ ಇರುವ ವೀರಶೈವ ಮಹಾಸಭಾದವರು ಒತ್ತಡ ತಂದಿದ್ದಾರೆ. ಪೂಜ್ಯ ಶ್ರೀಗಳ ಸಹಿಮಾತ್ರ ಪಡೆದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೊಂದು ವೇಳೆ ಶ್ರೀಗಳೇ ಈ ರೀತಿ ಹೇಳಿಕೆ ನೀಡಿದ್ದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸುತ್ತೇವೆ. ಹೀಗಾಗಿ ವೀರಶೈವ ಮಹಾಸಭಾದಂತೆ ನಡೆಯಿರಿ ಎಂದು ಯಡಿಯೂರಪ್ಪ ಮತ್ತು ಸೋಮಣ್ಣ ಮಠದ ಕಡೆಯವರಿಗೆ ಒತ್ತಡ ಹಾಕಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ ಎಂದು ಆರೋಪಿಸಿದರು.

ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರ ಏಳಿಗೆಯನ್ನ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಕಲಬುರಗಿ ಹಾಗೂ ಹೈದರಾಬಾದ್ ನಲ್ಲಿಯೂ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಿದ್ದೇವೆ ಎಂದು ಮಾತೆ ಮಹಾದೇವಿ ಹೇಳಿದರು.

Comments

Leave a Reply

Your email address will not be published. Required fields are marked *