ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣ: ಶಾಮನೂರು ಶಿವಶಂಕರಪ್ಪ

ಚಿತ್ರದುರ್ಗ: ಸ್ವಾಮೀಜಿಯೊಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಿಂದಾಗಿ ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿದರು.

ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಮಠದಿಂದ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಷಣದ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಪೋಕ್ಸೊ (POSCO) ಕೇಸ್‍ನಲ್ಲಿ ಮುರುಘಾಶ್ರೀ ಜೈಲುಪಾಲಾಗಿದ್ದಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಅನೇಕರು ಪರೋಕ್ಷವಾಗಿ ಮುರುಘಾಶ್ರೀ (Murugha Shree) ವಿರುದ್ಧ ಮುಗಿಬಿದ್ದರು. ಅಲ್ಲದೇ ಚಾರ್ಜ್ ಶೀಟ್ ನಲ್ಲಿನ ಅಂಶಗಳು ಬಯಲಾದ ಬಳಿಕ ಮುಖಂಡರು ಗರಂ ಆಗಿದ್ದು, ಇವತ್ತು ದಿನಪೂರ್ತಿ ಟಿವಿಗಳಲ್ಲಿ ನೋಡುತ್ತಿದ್ದೇವೆ. ಹೆಣ್ಣು ಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿ ಬರಬಾರದು ಎಂದು ಮುರುಘಾಶ್ರೀ ಮೇಲೆ ಶಿವಶಂಕರಪ್ಪ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಸರ್ಕಾರದಿಂದ ಸಹಾಯ ಬೇಕೆಂದು ಕೇಳುವುದು ನಾಚಿಕೆಗೇಡು. ನಮ್ಮ ಹೆಣ್ಣು ಮಕ್ಕಳು ಸಹ ಎಚ್ಚರವಾಗಿರಬೇಕು. ನಮ್ಮೆಲ್ಲರ ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂಬುದು ವೀರಶೈವರು ಅರಿಯಬೇಕು. ಒಳಪಂಗಡ ಬೇಧ ಮರೆತು ವೀರಶೈವರು ಒಂದಾಗಬೇಕು. ಇವತ್ತಿನ ಸಮಾರಂಭದಲ್ಲಿ ಎಲ್ಲರೂ ಸರ್ಕಾರದ ಸಹಾಯ ಕೇಳುತ್ತಿದ್ದಾರೆ. ಸರ್ಕಾರದಿಂದ ಸಹಾಯ ಬೇಕೆಂದು ಕೇಳುವುದು ನಾಚಿಕೆಗೇಡು. ಸ್ವಾಭಿಮಾನದಿಂದ ನಾವು ಇರಬೇಕು ಎಂದರು.

ನಾವೆಲ್ಲಾ ಸ್ವಶಕ್ತಿ ಪ್ರದರ್ಶಿಸಬೇಕು. ಸರ್ಕಾರದ ಮೇಲೆ ಡಿಪೆಂಡ್ ಆದರೆ ಎಂದೂ ಕೆಲಸ ಆಗಲ್ಲ. ನಾವು ಹತ್ತು ರೂ. ದುಡಿದರೆ ಒಂದು ರೂ. ದಾನ ಧರ್ಮ ಮಾಡಬೇಕೆಂದ ಅವರು, ನಾವೆಲ್ಲಾ ದಾನ ಧರ್ಮದಿಂದಲೇ ಶ್ರೀಮಂತರಾಗಿದ್ದೇವೆ ಎಂದರು. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್- ಮಠದ ಹಾಸ್ಟೆಲ್‍ನಲ್ಲಿ ಇಬ್ಬರು ಬಾಲಕಿಯರು ಪತ್ತೆ

ಕಾರ್ಯಕ್ರಮದಲ್ಲಿ ಸಾಣಿಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀ, ಸಿಎಂ ಬೊಮ್ಮಾಯಿ,ಸಚಿವರಾದ ಬಿಸಿಪಾಟೀಲ್,ಬಿಸಿ ನಾಗೇಶಗ ಸೇರಿದಂತೆ ಜಿಲ್ಲೆಯ ಶಾಸಕರುಗಳು ಹಾಗೂ ಗಣ್ಯರು ಇದ್ದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *