ಕ್ರಿಸ್‍ಮಸ್ ದಿನ ಬಡ ಮಕ್ಕಳೊಂದಿಗೆ ಕಾಲಕಳೆದ ಶ್ವೇತಾ ಶ್ರೀವಾತ್ಸವ್

ಬೆಂಗಳೂರು: ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಕ್ರಿಸ್‍ಮಸ್ ದಿನ ಬಹಳ ಅರ್ಥ ಪೂರ್ಣವಾಗಿ ಕಳೆದಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಅವರು ಮಾಡುವ ವರ್ಕೌಟ್ ಮತ್ತು ದಿನನಿತ್ಯದ ವಿಶೇಷ ಭಾಗವನ್ನು ಫೋಟೋ ಅಥವಾ ವೀಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇಂದು ಅವರು ವಿಶೇಷ ವೀಡಿಯೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಕ್ರಿಸ್ಮಸ್ ಸಮಯವನ್ನು ನಾನು ಚೆನ್ನಾಗಿ ಕಳೆದಿದ್ದೇನೆ. ಈ ದಿನ ನಾವು ಬಡ ಮಕ್ಕಳೊಂದಿಗೆ ಸಮಯ ಕಳೆದಿದ್ದೇವೆ. ಸುಂದರ ಹೃದಯಗಳ ಜೊತೆ ಈ ದಿನ ಸುಂದರವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

 

View this post on Instagram

 

A post shared by Shwetha Srivatsav (@shwethasrivatsav)

ನಾವು ಸಾಂತಾಕ್ಲಾಸ್ ಆಗಲು ಪ್ರಯತ್ನಿಸೋಣ. ಇನ್ನೊಬ್ಬರ ಮುಖದಲ್ಲಿ ನಗು, ಭರವಸೆ, ಉಲ್ಲಾಸ, ಅವರ ಜೀವನದಲ್ಲಿ ಪ್ರೀತಿಯನ್ನು ಹರಡಲು ಪ್ರಯತ್ನಿಸೋಣ. ನಾನು, ನನ್ನ ಪತಿ ಮತ್ತು ನನ್ನ ಮಗಳೊಂದಿಗೆ ಮಕ್ಕಳನ್ನು ಭೇಟಿ ಮಾಡಿದ್ದೆವು. ಈ ವೇಳೆ ನಾವು ಸಾಧ್ಯವಾದಷ್ಟು ಆ ಚಿಕ್ಕ ಮಕ್ಕಳನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಪ್ರಯತ್ನಿಸಿದ್ದೇವೆ ಎಂದು ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ.

ನಮ್ಮ ಜೀವನದ ಪ್ರಯಾಣದ ಅನುಭವಗಳನ್ನು ಈ ಸಮಯದಲ್ಲಿ ಮಕ್ಕಳೊಂದಿಗೆ ಹಂಚಿಕೊಂಡಿದ್ದೇನೆ. ಅವರಿಗೆ ಸ್ಫೂರ್ತಿ ತುಂಬಲು ಪ್ರಯತ್ನಿಸಿದ್ದೇನೆ. ಹೌದು, ಒಟ್ಟಾರೆಯಾಗಿ ಇದು ಅತ್ಯಂತ ಶಕ್ತಿಶಾಲಿ ಅನುಭವವಾಗಿತ್ತು ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

ವೀಡಿಯೋದಲ್ಲಿ ಶ್ವೇತಾ ಮತ್ತು ಅವರ ಮಗಳು ಕಾಣಿಸಿಕೊಂಡಿದ್ದು, ಶ್ವೇತಾ ಮಕ್ಕಳಿಗೆ ಊಟ ಬಡಿಸಿ, ಅವರೊಂದಿಗೆ ಮಾತನಾಡುತ್ತಿರುವ ತುಣುಕು ಇದೆ. ಮಕ್ಕಳಿಗೆ ಕೇಕ್, ಚಾಕೋಲೇಟ್ ತಂದಿದ್ದು, ಅದನ್ನು ಅವರಿಗೆ ಹಂಚಿದ್ದಾರೆ. ಕೇಕ್ ಅನ್ನು ಸ್ವತಃ ಅವರೇ ಎಲ್ಲರಿಗೂ ತಿನ್ನಿಸುವ ತುಣುಕು ಸಹ ವೀಡಿಯೋದಲ್ಲಿದೆ. ಈ ವೇಳೆ ಮಕ್ಕಳೊಂದಿಗೆ ಫೋಟೋವನ್ನು ತೆಗೆಸಿಕೊಂಡಿದ್ದು, ಎಲ್ಲರಿಗೂ ಸ್ಫೂರ್ತಿಯಾಗುವಂತೆ ಮಾತುಗಳನ್ನು ಆಡಿದ್ದಾರೆ.

Comments

Leave a Reply

Your email address will not be published. Required fields are marked *