England vs India, 1st Test: ಇಂಗ್ಲೆಂಡ್‌ ನೆಲದಲ್ಲಿ ಮೊದಲ ಪಂದ್ಯದಲ್ಲೇ ಜೈಸ್ವಾಲ್‌, ಗಿಲ್‌ ಶತಕದ ಸಾಧನೆ

ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌ ಮತ್ತು ಕ್ಯಾಪ್ಟನ್‌ ಶುಭಮನ್‌ ಗಿಲ್‌ ಶತಕಗಳ ಸಾಧನೆ ಮಾಡಿದ್ದಾರೆ.

ಜೈಸ್ವಾಲ್‌, ಇಂಗ್ಲೆಂಡ್‌ ನೆಲದಲ್ಲಿ ತಾನು ಆಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಅಂತೆಯೇ ಶುಭಮನ್‌ ಗಿಲ್‌ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.

ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ, ಭಾರತದ ಬ್ಯಾಟಿಂಗ್‌ನ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ ಎಂದು ಸಾಬೀತುಪಡಿಸಿದರು.

ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರೊಂದಿಗೆ ಎಲೈಟ್‌ ಪಟ್ಟಿಗೆ ಜೈಸ್ವಾಲ್‌ ಸೇರ್ಪಡೆಯಾಗಿದ್ದಾರೆ. 1996ರಲ್ಲಿ ಗಂಗೂಲಿ ಟೆಸ್ಟ್‌ ಪಂದ್ಯದಲ್ಲಿ ಶತಕದ (131) ಸಾಧನೆ ಮಾಡಿದ್ದರು.

ಲೀಡ್ಸ್‌ನಲ್ಲಿ ಶುಕ್ರವಾರ ಆರಂಭವಾದ ಟೆಸ್ಟ್‌ ಪಂದ್ಯದಲ್ಲಿ ಜೈಸ್ವಾಲ್‌ ಅಮೋಘ ಇನ್ನಿಂಗ್ಸ್‌ ಕಟ್ಟಿದರು. 159 ಬಾಲ್‌ಗೆ 101 ರನ್‌ ಗಳಿಸಿದ್ದಾರೆ. ಇನ್ನು ಶುಭಮನ್‌ ಗಿಲ್‌ ಔಟಾಗದೇ ಶತಕದ ಸಾಧನೆ ಮಾಡಿದ್ದಾರೆ.