ಮನಸ್ಸು ನೋಡಿ ಪ್ರೀತಿ ಮಾಡಿದ್ದೇನೆ, ವಿಚ್ಛೇದನ ಕೊಡಲ್ಲ: ರಾಜೇಶ್ ಪತ್ನಿ

ಬೆಂಗಳೂರು: ನಾನು ಅವರ ಫೇಮ್ ನೋಡಿ ಪ್ರೀತಿ ಮಾಡಿ ಮದುವೆಯಾಗಿಲ್ಲ. ಅವರ ಮನಸ್ಸು ನೋಡಿ ಮದುವೆಯಾಗಿದ್ದೇನೆ. ಹೀಗಾಗಿ ನಾನು ಅವರಿಗೆ ವಿಚ್ಛೇದನ ಕೊಡಲ್ಲ ಎಂದು ಕಿರುತೆರೆ ನಟ ರಾಜೇಶ್ ಪತ್ನಿ ಶೃತಿ ಹೇಳಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೃತಿ, ಅಂದು ನಾನೇನು ಮಾಡಿಲ್ಲ ಸುಳ್ಳು ಹೇಳುತ್ತಿದ್ದಾಳೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು. ಈಗ ಪೊಲೀಸರು ತನಿಖೆ ಮಾಡಿ ಜಾರ್ಚ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರ ಮಧ್ಯೆ ಗಲಾಟೆಯಾದಗಿನಿಂದ ನಾನು ಒಬ್ಬಳೆ ಇದ್ದೀನಿ. ಇದುವರೆಗೂ ನನಗೆ ಅವರು ಒಂದು ಬಾರಿಯೂ ಫೋನ್ ಮಾಡಿಲ್ಲ. ನನ್ನನ್ನು ಪೊಲೀಸರು ವಿಚಾರಣೆ ಮಾಡಿಲ್ಲ. ನಮ್ಮ ಪೋಷಕರನ್ನು ಪೊಲೀಸರು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ರಾಜೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ-ಬಯಲಾಯ್ತು ನಟನ ಅಸಲಿ ಮುಖ!

ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿಲ್ಲ. ಆದರೆ ಅವರ ಕಡೆಯಿಂದ ವಿಚ್ಛೇಧನಕ್ಕೆ ಅಪ್ಲೈ ಮಾಡಿದ್ದಾರೆ. ವಿಚ್ಛೇದನ ನೀಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಆದರೆ ನಾನು ವಿಚ್ಛೇದನ ಕೊಡಲ್ಲ. ಅವರ ಜೊತೆಯೇ ನಾನು ಬದುಕಬೇಕು ಎಂದರು.

ನಾನು ಪ್ರೀತಿ ಮಾಡಿ ಮದುವೆಯಾಗಿದ್ದೇನೆ. ಅವರು ಸೀರಿಯಲ್ ಮತ್ತು ಫೇಮ್‍ನಿಂದ ಈ ರೀತಿ ಮಾಡುತ್ತಿದ್ದಾರೆ. ಆದರೆ ನಾನು ಅವರ ಫೇಮ್ ನೋಡಿ ಮದುವೆಯಾಗಿಲ್ಲ. ಅವರ ಮನಸ್ಸು ನೋಡಿ ಪ್ರೀತಿಸಿ ಮದುವೆಯಾಗಿದ್ದಾನೆ. ಅವರು ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮಿಬ್ಬರ ಮದುವೆಯಾಗಿತ್ತು. ಆದ್ದರಿಂದ ನಾನು ಯಾವುದೇ ಪರಿಹಾರ, ಎಷ್ಟು ಹಣ ಕೊಟ್ಟರು ವಿಚ್ಛೇದನಕ್ಕೆ ಒಪ್ಪಿಕೊಳ್ಳಲ್ಲ ಎಂದು ಶೃತಿ ಅವರು ತಿಳಿಸಿದರು.

ರಾಜೇಶ್ ಮತ್ತು ಅವರ ಅಮ್ಮ ಪದೇ ಪದೇ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಊಟನೂ ಕೊಡದೆ ಕಿರುಕುಳ ಕೊಡುತ್ತಿದ್ದರು. ನೀನು ನಮಗೆ ಏನು ವರದಕ್ಷಿಣೆ ಕೊಟ್ಟಿಲ್ಲ. ನಮ್ಮ ಮನೆಗೆ ಹೊಂದಿಕೊಳ್ಳುತ್ತಿಲ್ಲ. ನನ್ನ ಮಗನಿಗೆ ಎರಡನೇ ಮದುವೆ ಮಾಡಿಸುತ್ತೇನೆ ಎಂದು ಕಿರುಕುಳ ಕೊಡುತ್ತಿದ್ದರು. ನಾನು ಪ್ರೀತಿಸಿ ಮದುವೆಯಾಗಿದ್ದರಿಂದ ನಮ್ಮ ಪೋಷಕರ ಬಳಿ ಏನು ಹೇಳಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

ಕೊನೆಗೆ ಇವರ ಕಿರುಕುಳ ಸಹಿಸಿಕೊಳ್ಳಲಾಗದೇ ಮನೆಯಲ್ಲಿ ಹೇಳಿದೆ. ಆಗ ನಮ್ಮ ತಂದೆ ಎರಡು ಬಾರಿ ಮಾತನಾಡಿ ಸರಿ ಮಾಡಲು ಪ್ರಯತ್ನಿಸಿದ್ದರು. ಆದರೂ ರಾಜೇಶ್ ಕೇಳಿಲ್ಲ. ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮ ಕುಟುಂಬಕ್ಕೆ ಧಾರಾವಾಹಿ ಬೇಡ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಿಲ್ಲ. ಈಗ ಸೀರಿಯಲ್, ಫೇಮ್‍ನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಶೃತಿ ತಿಳಿಸಿದರು.

https://www.youtube.com/watch?v=z83AFF9LPEY

Comments

Leave a Reply

Your email address will not be published. Required fields are marked *