ಬಿಗ್ ಬಾಸ್ ಮನೆಯಿಂದ ಹೊರಬಂದ ಶೃತಿ ಪ್ರಕಾಶ್‍ಗೆ ಕಾದಿತ್ತು ಸರ್ ಪ್ರೈಸ್

ಬೆಂಗಳೂರು: ಕನ್ನಡದ ಫೇಮಸ್ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್-5’ ಅಂತಿಮ ಘಟ್ಟಕ್ಕೆ ತಲುಪಿದೆ. ಶನಿವಾರ ಅದ್ಧೂರಿಯಾಗಿ ಗ್ರಾಂಡ್ ಫಿನಾಲೆ ಆರಂಭಗೊಂಡಿತ್ತು. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ (ಜೆಕೆ), ದಿವಾಕರ್, ಶೃತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅಂತಿಮ ಘಟ್ಟದಲ್ಲಿದ್ದರು. ಇಂದು ರಾತ್ರಿ ಯಾರು ಬಿಗ್ ಬಾಸ್ ವಿನ್ನರ್ ಎಂಬ ಕೂತುಹಲಕ್ಕೆ ತೆರೆ ಬೀಳಲಿದೆ.

ಏನದು ಸರ್ ಪ್ರೈಸ್? : ಶನಿವಾರ ಐವರಲ್ಲಿ ಬಿಗ್ ಬಾಸ್ ಮನೆಯಿಂದ ಶೃತಿ ಪ್ರಕಾಶ್ ಹೊರ ಬಂದರು. ಮನೆಯಿಂದ ಹೊರ ಬರುವಾಗ ಭಾವುಕರಾದ ಶೃತಿ ಕಣ್ಣೀರು ಹಾಕಿದರು. ಮನೆಯಿಂದ ಹೊರ ಬಂದು ಬಿಗ್‍ಬಾಸ್ ವೇದಿಕೆಯ ಮೇಲೆ ಬಂದಾಗ ಶೃತಿ ಅವರಿಗೆ ಸರ್ ಪ್ರೈಸ್  ಕಾದಿತ್ತು. ಗ್ರ್ಯಾಂಡ್ ಫಿನಾಲೆ ನೋಡಲು ತಂದೆ-ತಾಯಿ ಮತ್ತು ಸಹೋದರಿ ಆಗಮಿಸಿದ್ದನ್ನು ಕಂಡು ಶೃತಿ ಒಂದು ಕ್ಷಣ ಆಶ್ಚರ್ಯ ಚಕಿತರಾದರು. ತನ್ನ ಪೋಷಕರನ್ನು ಮತ್ತು ಸಹೋದರಿಯನ್ನು ನೋಡಿ ಶೃತಿ ಸಂತೋಷದ ಕಣ್ಣೀರು ಹಾಕಿದರು.

ವೇದಿಕೆಗೆ ಬಂದ ಶೃತಿ ಪೋಷಕರು ಮಗಳ ಬಗ್ಗೆ ಹಮ್ಮೆಯನ್ನು ವ್ಯಕ್ತಪಡಿಸಿದರು. ಶೃತಿ ಹೊರ ಬಂದ ಬಳಿಕ ಮನೆಯಲ್ಲಿ ನಾಲ್ವರು ಉಳಿದಿದ್ದರು. ನಾಲ್ವರಲ್ಲಿ ನಿವೇದಿತಾ ಗೌಡ ಕೂಡ ಹೊರ ಬಂದಿದ್ದು, ಚಂದನ್ ಶೆಟ್ಟಿ, ಜೆಕೆ ಮತ್ತು ದಿವಾಕರ್ ಫೈನಲಿಸ್ಟ್ ಗಳಾಗಿ ದೊಡ್ಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಉಳಿದಂತೆ ಬಿಗ್‍ಬಾಸ್ ಸೀಸನ್ 5ರಲ್ಲಿ ಭಾಗಿಯಾಗಿದ್ದ ಎಲ್ಲ ಸ್ಪರ್ಧಿಗಳು ಫಿನಾಲೆಯಲ್ಲಿ ಭಾಗಿಯಾಗಿದ್ದಾರೆ.

ಚಂದನ್, ಜಯರಾಂ ಕಾರ್ತಿಕ್ ಸೆಲೆಬ್ರಿಟಿಯಾಗಿದ್ದು, ದಿವಾಕರ್ ಕಾಮನ್ ಮ್ಯಾನ್ ಆಗಿದ್ದಾರೆ. `ಬಿಗ್ ಬಾಸ್’ ಗೆ ಎಂಟ್ರಿ ಕೊಡುವಾಗ ಕಾಮನ್ ಮ್ಯಾನ್ ಆಗಿದ್ದ ದಿವಾಕರ್ ತಮ್ಮದೇ ಶೈಲಿಯಿಂದಾಗಿ ಸೆಲೆಬ್ರೆಟಿಗಳನ್ನೂ ಹಿಂದಿಕ್ಕಿ ಫೈನಲ್ ಪ್ರವೇಶಿಸಿ, ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ. ಚಂದನ್ ಹಾಗೂ ಕಾರ್ತಿಕ್ ಅವರೂ ತಮ್ಮದೇ ಆಟದಿಂದಾಗಿ ಗಮನ ಸೆಳೆದಿದ್ದಾರೆ. ಈ ಹಿಂದಿನ 4 ಸೀಸನ್ ಗಳಲ್ಲಿ ಕ್ರಮವಾಗಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ ಹಾಗೂ ಪ್ರಥಮ್ ಅವರು ವಿಜೇತರಾಗಿದ್ದರು.

Comments

Leave a Reply

Your email address will not be published. Required fields are marked *