ಕಾಮಿಡಿ ಶೋಗಾಗಿ ಕಿರುತೆರೆಗೆ ಬಂದ ಶ್ರುತಿ ಹರಿಹರನ್

ಮೀಟೂ ಪ್ರಕರಣದ ನಂತರ ಕೆಲ ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಿದ್ದ ನಟಿ ಶ್ರುತಿ ಹರಿಹರನ್, ಇದೀಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಪರಮ್ ವಾ ಸ್ಪಾಟ್ ಲೈನ್ ‍ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ, ಅರ್ಜುನ್ ಲೂವಿಸ್ ನಿರ್ದೇಶನದ ಸ್ಟ್ರಾಬರಿ ಚಿತ್ರಕ್ಕೆ ಇವರೇ ನಾಯಕಿ. ಈಗಾಗಲೇ ‘ಸಾಲುಗಾರ’ ಹೆಸರಿನ ಸಿನಿಮಾದ ಶೂಟಿಂಗ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಧನಂಜಯ್ ಮುಖ್ಯ ಭೂಮಿಕೆಯ ‘ಹೆಡ್ ಬುಷ್’ ಚಿತ್ರದಲ್ಲೂ ಶ್ರುತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ಅವರು ಕಿರುತೆರೆಗೂ ಕಾಲಿಟ್ಟಿದ್ದಾರೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

ಶ್ರುತಿ ಹರಿಹರನ್ ಕಿರುತೆರೆಗೆ ಕಾಲಿಡುತ್ತಿರುವುದು ಹೊಸದೇನೂ ಅಲ್ಲ. ಆದರೆ, ಈ ಬಾರಿ ಆಯ್ಕೆ ಮಾಡಿಕೊಂಡಿರುವ ವೇದಿಕೆ ಮಾತ್ರ ಹೊಸದು. ಶ್ರುತಿ ಸಿನಿಮಾ ರಂಗಕ್ಕೂ ಬರುವ ಮುನ್ನ ನೃತ್ಯ ಕಲಾವಿದೆ. ಈ ವೃತ್ತಿಯೇ ಅವರನ್ನು ‘ಲೂಸಿಯಾ’ ಚಿತ್ರಕ್ಕೆ ಆಯ್ಕೆ ಆಗುವಂತೆ ಮಾಡಿತ್ತು. ಆನಂತರ ಅವರು ಸ್ಟಾರ್ ನಟಿಯಾಗಿ ಬೆಳೆದರು. ಹಾಗಾಗಿ ಅವರನ್ನು ಖಾಸಗಿ ಮನರಂಜನಾ ವಾಹಿನಿಯೊಂದು ಡಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಈ ಬಾರಿ ಅದೇ ವಾಹಿನಿಯೇ ಕಾಮಿಡಿ ಶೋಗೆ ತೀರ್ಪುಗಾರರಾಗಿ ಶ್ರುತಿ ಹೋಗಿದ್ದಾರೆ.

ಈಗಾಗಲೇ ವಾಹಿನಿಯು ಪ್ರೊಮೋ ಬಿಡುಗಡೆ ಮಾಡಿದ್ದು, ಶ್ರುತಿ ಅವರ ಜತೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಕಾಮಿಡಿ ಕಲಾವಿದ ಕುರಿ ಪ್ರತಾಪ್ ತೀರ್ಪುಗಾರರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಈ ಕಾಮಿಡಿ ಕಾರ್ಯಕ್ರಮಕ್ಕೆ ಶಿವರಾಜ್ ಕೆ.ಆರ್ ಪೇಟೆ ಅವರ ನಿರೂಪಣೆ ಇರಲಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

ಮುಖ್ಯಮಂತ್ರಿ ಚಂದ್ರ ಎಲ್ಲ ರೀತಿಯ ಪಾತ್ರವನ್ನೂ ಮಾಡಿದವರು. ಕಾಮಿಡಿ ಶೋಗಳಲ್ಲೂ ತೀರ್ಪುಗಾರರಾದವರು. ಕುರಿ ಪ್ರತಾಪ್ ಮಜಾ ಟಾಕೀಸ್ ಮೂಲಕ ಫೇಮಸ್ ಮತ್ತು ಕಾಮಿಡಿ ಕಲಾವಿದರು. ಆದರೆ, ಶ್ರುತಿ ಅವರು ಈ ಕಾರ್ಯಕ್ರಮದಲ್ಲಿ ಹೇಗೆ ಇರಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು.

Comments

Leave a Reply

Your email address will not be published. Required fields are marked *