ಹೋಟೆಲ್ ಊಟವನ್ನು ಎಂದೂ ಸೇವಿಸದ ಸಿದ್ದಗಂಗೆಯ ಬೆಳಕು ಶ್ರೀಗಳದ್ದು ಸದಾ ಸಾತ್ವಿಕ ಆಹಾರ. ರಾಗಿ ಜೋಳದಿಂದ ತಯಾರಿಸಲ್ಪಟ್ಟ ಆಹಾರ ಹಾಗೂ ಹಣ್ಣು ಹಂಪಲುಗಳನ್ನು ಅಷ್ಟೇ ಶ್ರೀಗಳು ಸೇವಿಸುತ್ತಿದ್ದರು.
ಅದು ಮಿತ ಆಹಾರ ಸೇವನೆ. ಇನ್ನು ಹೆಚ್ಚಾಗಿ ಬೇವಿನ ಚಕ್ಕೆ ರಸವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವನೆ ಮಾಡುತ್ತಿದ್ದ ಶ್ರೀಗಳು ಯೋಗಭ್ಯಾಸವನ್ನು ಎಂದೂ ತಪ್ಪಿಸಿದವರಲ್ಲ. ಇದು ಬೇವಿನ ಚಕ್ಕೆ ಕಷಾಯವೇ ಅವರ ದಿವ್ಯ ಆರೋಗ್ಯದ ಮಹಾ ರಹಸ್ಯ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

ಹುಳಿ, ಖಾರ ಎಣ್ಣೆ ಮಸಾಲೆ ಪದಾರ್ಥಗಳನ್ನು ಮುಟ್ಟುವುದೇ ಇಲ್ಲ, ಒಗ್ಗರಣೆಯ ಪದಾರ್ಥ ಸೇವಿಸುವುದು ಕೂಡ ತೀರಾ ಅಪರೂಪ. ಬೆಳಗ್ಗೆ ಹೆಸರು ಬೇಳೆಯನ್ನು ಸ್ವಲ್ಪ ಸೈಂಧಲವಣ ಜೀರಿಗೆ ಪುಡಿ ಹಾಕಿ ಕುದಿಸಿದರೆ ಆಯ್ತು. ಅದೇ ಅವರ ಸಾರು ಪಲ್ಯ, ಅದರ ಜೊತೆ ಉಪ್ಪು ಖಾರ ಹಾಕದೇ ಇರುವ ತೆಂಗಿನಕಾಯಿ ಚಟ್ನಿ ಇದ್ದರಾಯಿತು. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!
ಕೇವಲ ಅರ್ಧಕಪ್ ಹಾಲು ಮಾತ್ರ ಕುಡಿಯುತ್ತಿದ್ದರು. ಕೊಬ್ಬು ಉಂಟುಮಾಡುವ ಯಾವ ಪದಾರ್ಥಗಳನ್ನು ಸ್ವೀಕರಿಸುತ್ತಿಲ್ಲ. ಮಧ್ಯಾಹ್ನ ಈ ಹಿಂದೆ ಕೆಲವೊಮ್ಮೆ ಮುದ್ದೆ ಹಾಗೂ ತೊಗರಿ ಬೇಳೆ ಸಾರು ಸೇವಿಸುತ್ತಿದ್ದರು. ಈ ದೇಹ ಈಶ್ವರನ ಪ್ರಸಾದ ಕಾಯ, ಅದನ್ನು ಕೆಡಿಸಬಾರದು, ಅನಾರೋಗ್ಯಗೊಳಿಸಬಾರದು, ದೇಹವನ್ನು ರೋಗಾದಿಗಳಿಂದ ತುತ್ತಾಗದಂತೆ ನೋಡಿಕೊಳ್ಳುವುದು ಒಂದು ಪೂಜೆಯೇ ಅನ್ನೋದು ಶ್ರೀಗಳ ಮಾತು.
https://www.youtube.com/watch?v=2lK_EgaS96U
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply