ಧಾರವಾಡ: ಕಲಾವಿದರೊಬ್ಬರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಮರಳಿನ ಕಲಾಕೃತಿಯನ್ನು ರಚಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ನಗರದ ಕೆಲಗೇರಿ ನಿವಾಸಿಯಾದ ಮಂಜುನಾಥ ಹಿರೇಮಠ ಸಿದ್ದಗಂಗಾ ಶ್ರೀಗಳ ಕಲಾಕೃತಿಯನ್ನ ರಚನೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮಂಜುನಾಥ ಅವರು ಮರಳಿನಲ್ಲಿ ಸಿದ್ದಗಂಗಾ ಶ್ರೀಗಳ ಕಲಾಕೃತಿಯನ್ನು ಮಾಡಿ ಪೂರ್ಣಗೊಳಿಸಿದ್ದು, ಕಲಾಕೃತಿಗೆ ಪೂಜೆ ಸಹ ಸಲ್ಲಿಸಿದ್ದಾರೆ. ಹಾಗೆಯೇ ಮಂಜುನಾಥ್ ಅವರ ಕೆಲಸ ಸ್ಥಳೀಯರ ಮನ ಗೆದ್ದಿದ್ದು, ಸಾರ್ವಜನಿಕರು ಕೂಡ ಶ್ರೀಗಳ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗದ್ದುಗೆ ಪ್ರವೇಶಿಸಲು ಶಲ್ಯ, ಪಂಚೆ ತೊಟ್ಟ 8 ಜನ ಪೊಲೀಸರು

ಈ ಕುರಿತು ಕಲಾವಿದ ಮಂಜುನಾಥ ಹಿರೇಮಠ ಅವರು ಮಾತನಾಡಿ, ಶ್ರೀಗಳ ಅಂತಿಮ ದರ್ಶನ ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಸಿದ್ದಗಂಗಾ ಮಠಕ್ಕೆ ತೆರಳಲು ತುಂಬಾ ದೂರ ಪ್ರಯಾಣಿಸಬೇಕು ಹಾಗೆಯೇ ಅಲ್ಲಿ ಈಗಾಗಲೇ ಇರುವ ಜನರ ನಡುವೆ ಸರಿಯಾಗಿ ನಡೆದಾಡುವ ದೇವರ ದರ್ಶನ ಸಿಗುವುದು ಕಷ್ಟ. ಆದರಿಂದ ಈ ಭಾಗದ ಜನರಿಗೆ ಇಲ್ಲಿಂದಲೇ ಶ್ರೀಗಳ ದರ್ಶನ ಭಾಗ್ಯ ಸಿಗಲಿ ಅಂತ ಈ ಮರಳಿನ ಕಲಾಕೃತಿಯನ್ನು ಮಾಡಿದ್ದೇನೆ. ಶ್ರೀಗಳ ಕಲಾಕೃತಿಗೆ ನಮಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ ಎಂದು ಹೇಳಿದರು.
https://www.youtube.com/watch?v=VeSYe14zzhk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply