-ರೈಲಿನಲ್ಲಿ ತಳ್ಳಾಟ, ನೂಕಾಟ, ಗಲಾಟೆ
-ಕೊರೊನಾ ಆತಂಕದಿಂದ ರೈಲಿನೊಳಗೆ ಹೋಗದ ಪೊಲೀಸರು
ಮುಂಬೈ: ಆಹಾರಕ್ಕಾಗಿ ಕಾರ್ಮಿಕರು ಕಿತ್ತಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಿಂದ ಬಿಹಾರಕ್ಕೆ ಹೊರಟಿದ್ದ ರೈಲಿನಲ್ಲಿ ನಡೆದಿದೆ. ಶ್ರಮಿಕ ರೈಲ್ವೇ ಮೂಲಕ ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ.

ಮಹಾರಾಷ್ಟ್ರದಿಂದ ಬಿಹಾರದತ್ತ ಹೊರಟಿದ್ದ ರೈಲು ಮಧ್ಯಾಹ್ನ ಸಾತನಾ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ರೈಲಿನಲ್ಲಿ ಕಾರ್ಮಿಕರು ಆಹಾರಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ರು ಒದ್ದು, ಅವಾಚ್ಯ ಪದ ಬಳಸಿ ನಿಂದಿಸಿಕೊಂಡಿದ್ದಾರೆ. ನಿಲ್ದಾಣದಲ್ಲಿ ಆರ್‍ಪಿಎಪ್ ಸಿಬ್ಬಂದಿ ಹೇಳಿದ್ರೂ ಜಗಳ ಮಾಡಿಕೊಂಡಿದ್ದಾರೆ.
https://twitter.com/Anurag_Dwary/status/1258019510868561922
ಕೊರೊನಾ ಆತಂಕದಿಂದ ಪೊಲೀಸರು ರೈಲಿನೊಳಗೆ ಹೋಗಲು ಧೈರ್ಯ ಮಾಡಿಲ್ಲ. ಕಿಟಕಿಯಿಂದಲೇ ಹೇಳಿದ್ರೂ ಕಾರ್ಮಿಕರು ಕ್ಯಾರೆ ಎಂದಿಲ್ಲ. ಹೊಡೆದಾಡಿಕೊಂಡ ಕಾರ್ಮಿಕರು ಕೊನೆಗೆ ತಾವೇ ಸುಸ್ತಾಗಿ ಕೂತಿದ್ದಾರೆ. ಕೆಲ ಸಮಯದ ಬಳಿಕ ರೈಲು ಬಿಹಾರದತ್ತ ಪ್ರಯಾಣ ಬೆಳೆಸಿದ್ದು, ಕಾರ್ಮಿಕರ ಹೊಡೆದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply