ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರಭಾಸ್- ಹೊಸ ಲುಕ್ ನೋಡಿ ಶ್ರದ್ಧಾ ಕಪೂರ್ ಫಿದಾ

ಹೈದರಾಬಾದ್: ಟಾಲಿವುಡ್ ನ ಡ್ರೀಮ್ ಬಾಯ್, ಬಾಹುಬಲಿ ಪ್ರಭಾಸ್ ಹೊಸ ಲುಕ್ ನೋಡಿ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಫುಲ್ ಫಿದಾ ಆಗಿದ್ದಾರೆ.

ಬಾಹುಬಲಿ ಸಿನಿಮಾದ ಬಳಿಕ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಪ್ರಭಾಸ್ ತಮ್ಮ ಹೊಸ ಪ್ರಯತ್ನಗಳಿಂದ ಸಿನಿ ಇಂಡಸ್ಟ್ರಿಯ ಆಕರ್ಷಣೆ ಆಗಿದ್ದಾರೆ. ಇದೀಗ ಅವರ ಹೊಸ ಫೋಟೋಶೂಟ್ ನೋಡಿ ಖುದ್ದು ಶ್ರದ್ಧಾ ಕಪೂರ್ ಮಾರುಹೋಗಿದ್ದಾರೆ.

‘ಜಿ ಕ್ಯೂ’ ಮ್ಯಾಗಜಿನ್ ಕವರ್ ಪೇಜಿನಲ್ಲಿ ಮೊದಲ ಬಾರಿಗೆ ಪ್ರಭಾಸ್ ಫೋಟೋ ಮುದ್ರಣಗೊಂಡಿದೆ. ಹಿಂದೆಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಪ್ರಭಾಸ್ ಈ ಫೋಟೋದಲ್ಲಿ ಮಿಂಚಿದ್ದಾರೆ. ಸಂಪೂರ್ಣ ಫಾರ್ಮಲ್ ಲುಕ್ ನಲ್ಲಿ ಪ್ರಭಾಸ್ ಕಾಣುತ್ತಿದ್ದು, ಮೊದಲಿಗಿಂತಲೂ ಸಿಕ್ಕಾಪಟ್ಟೆ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಮ್ಯಾಗಜಿನ್ ಕವರ್ ಫೋಟೋ ಹಾಕಿಕೊಂಡು ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನು ತಿಳಿಸಿದ್ದಾರೆ. ಫೋಟೋ ಅಪ್ಲೋಡ್ ಆಗುತ್ತಲೇ ಶ್ರದ್ಧಾ ಕಪೂರ್ ‘ಲವ್ ಇಟ್’ ಅಂತಾ ಬರೆದು ಹೃದಯದ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.

ಬಾಹುಬಲಿ ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್ ‘ಸಾಹೋ’ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಪ್ರಭಾಸ್ ಮೊದಲ ಬಾರಿಗೆ ಶ್ರದ್ಧಾ ಕಪೂರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 2017ರ ಅಕ್ಟೋಬರ್ ನಲ್ಲಿ ಈ ಜೋಡಿ ಸಾಹೋ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ.

ಸಾಹೋ ಆ್ಯಕ್ಷನ್ ಥ್ರಿಲರ್ ಕಥೆಯನ್ನು ಹೊಂದಿದ್ದು, ಸುಜೀತ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ಸಿನಿಮಾಗೆ ವಂಶಿಕೃಷ್ಣ ರೆಡ್ಡಿ ಬಂಡವಾಳ ಹಾಕಿದ್ದು ತೆಲಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ.

Comments

Leave a Reply

Your email address will not be published. Required fields are marked *