ಭೀಮಾತೀರದ ಹಂತಕನ ಮೇಲೆ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ -ಸಾವು ಬದುಕಿನ ಮಧ್ಯೆ ಬಾಗಪ್ಪ ನರಳಾಟ

ವಿಜಯಪುರ: ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಸಹಚರ ಬಾಗಪ್ಪನ ಮೇಲೆ ವಿಜಯಪುರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ ನಡೆದಿದೆ.

ಮಂಗಳವಾರ ಬೆಳಗ್ಗೆ ವಿಚಾರಣೆಗೆ ಬಂದಿದ್ದ ಬಾಗಪ್ಪನ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಮೂರು ಗುಂಡುಗಳು ಬಾಗಪ್ಪನ ದೇಹ ಹೊಕ್ಕಿದ್ದು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳಷ್ಟೇ ಬಾಗಪ್ಪ ಕಸ್ಟಡಿಯಿಂದ ಹೊರಬಂದಿದ್ದು, ಇದು ಎರಡನೇ ವಿಚಾರಣೆಯಾಗಿತ್ತು. ಸಹೋದರ ಸಂಬಂಧಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಇತ್ತು.

ಬಾಗಪ್ಪ ನ್ಯಾಯಾಲಯಕ್ಕೆ ಒಬ್ಬೊಂಟಿಯಾಗಿಯೇ ಬರುತ್ತಿದ್ದುದನ್ನು ಗಮನಿಸಿಯೇ ಈ ದಾಳಿ ನಡೆದಿದೆ ಎಂದು ಹೇಳಲಾಗ್ತಿದೆ. ಕೆಲ ದಿನಗಳ ಹಿಂದೆ ಸಾಕ್ಷಿದಾರನಿಗೂ ಬಾಗಪ್ಪ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸದ್ಯ ನ್ಯಾಯಾಲಯದ ಆವರಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಈ ಬಗ್ಗೆ ಮಾತನಡಿದ ಎಸ್‍ಪಿ ಕುಲ್‍ದೀಪ್ ಕುಮಾರ್, ಕೋರ್ಟ್ ಆವರಣದಲ್ಲಿ ಶೂಟೌಟ್ ನಡೆದಿದೆ. ಸ್ಥಳದಲ್ಲಿ ನಾಲ್ಕು ಕಾಟ್ರಿಡ್ಜ್ ಸಿಕ್ಕಿದೆ. ಈ ಸಂಬಂಧ ಸ್ಥಳೀಯರಿಂದ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಅಂದ್ರು.

ಆರೋಪಿಗಳನ್ನು ಕೆಲವರು ನೋಡಿದ್ದಾಗಿ ಹೇಳಿದ್ದಾರೆ. ಪಲ್ಸರ್ ಬೈಕ್‍ನಲ್ಲಿ ಬಂದಿದ್ದಂತೆ ಕಾಣುತ್ತದೆ. ಐ ವಿಟ್‍ನೆಸ್ ಏನು ಹೇಳ್ತಾರೆ ಅದರ ಪ್ರಕಾರ ತನಿಖೆ ನಡೆಸುತ್ತೇವೆ. ಗಾಯಾಳು ಬಾಗಪ್ಪ ಹರಿಜನ ಅವರಿಗೆ 4 ಗುಂಡು ತಾಗಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಬಾಗಪ್ಪ ಬೇಲ್ ಮೇಲಿದ್ದು, 302ಕೇಸ್‍ನಲ್ಲಿ ಇಂದು ವಿಚಾರಣೆಗೆ ಬಂದಿದ್ದಾಗಿ ಹೇಳಿದ್ರು.

ಯಾರು ಈ ಬಾಗಪ್ಪ?: ಬಾಗಪ್ಪ ಹರಿಜನ್ ಚಂದಪ್ಪ ಹರಿಜನ್ ಬಲಗೈ ಬಂಟ. ಚಂದಪ್ಪ ಹರಿಜನ್ ತಮ್ಮ ಬಸವರಾಜ್ ಹರಿಜನ್ ಬಾಗಪ್ಪನಿಂದ ಕೊಲೆಯಾಗಿದ್ದ. 2013ರ ಜನವರಿ 3ರಂದು ಬಾಗಪ್ಪ ಹರಿಜನ್ ಬಸವರಾಜ್ ಮೇಲೆ 7 ಸುತ್ತಿನ ಗುಂಡು ಹಾರಿಸಿ ಕೊಲೆ ಮಾಡಿದ್ದ. ಸಿಂದಗಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಈ ಕೊಲೆ ನಡೆದಿತ್ತು. 2 ಕೊಲೆ 2 ಕೊಲೆ ಯತ್ನ ಪ್ರಕರಣದಲ್ಲಿ ಬಾಗಪ್ಪ ಆರೋಪಿಯಾಗಿದ್ದ.

Comments

Leave a Reply

Your email address will not be published. Required fields are marked *