ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗ್ತಾರ ಪ್ರಭಾಸ್?

ಹೈದರಾಬಾದ್: ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ.

ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಸುಪುತ್ರಿ ನಿಹಾರಿಕಾ ಕೊನಿಡೆಲ್ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನಿಹಾರಿಕಾರನ್ನು ಪ್ರಭಾಸ್ ಮದುವೆ ಆದ್ರೆ ಪರೋಕ್ಷವಾಗಿ ಚಿರಂಜೀವಿ ಅಳಿಯನಾಗುತ್ತಾರೆ.

ನಿಹಾರಿಕಾ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ತೆರಕಂಡ ‘ಒಕ ಮನಸು’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಪಾದರ್ಪಣೆ ಮಾಡಿದ್ದಾರೆ. ಪ್ರಭಾಸ್ ಮತ್ತು ನಿಹಾರಿಕಾ ಮದುವೆಯ ಬಗ್ಗೆ ನಟನ ಕೃಷ್ಣಂರಾಜು ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಗಾಸಿಪ್ ಗಳು ಹರಿದಾಡುತ್ತಿವೆ. ಇತ್ತ ಚಿರಂಜೀವಿ ಕುಟುಂಬ ಮೂಲಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲ ಅಂತೆ ಕಂತೆಗಳು ಸುಳ್ಳು ಅಂತಾ ಹೇಳುತ್ತಿವೆ ಎಂಬ ಮತ್ತೊಂದು ಗಾಸಿಪ್ ಹರಿದಾಡುತ್ತಿದೆ.

ಈ ಎಲ್ಲಾ ಗಾಸಿಪ್ ಗಳು ಒಂದು ಕಡೆಯಾದರೆ ಮೊದಲಿನಿಂದಲೂ ಅನುಷ್ಕಾ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗುತ್ತಾರೆ ಎಂದು ಪ್ರಭಾಸ್ ಆಪ್ತ ಮೂಲಗಳು ಹೇಳುತ್ತಿವೆ. ಇನ್ನು ಇವರಿಬ್ಬರ ನಡುವೆ ಪ್ರೇಮಾಂಕುರವಿದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಹುಟ್ಟು ಹಬ್ಬಕ್ಕಾಗಿ ಇಬ್ಬರು ಒಬ್ಬರಿಗೊಬ್ಬರು ಭಾರೀ ಬೆಲೆಯ ಗಿಫ್ಟ್ ಗಳನ್ನು ನೀಡಿದ್ದರು. ಪ್ರಭಾಸ್ ‘ಸಾಹೋ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *