ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡಿದಾಗ ಹೊತ್ತಿಕೊಂಡಿತು ಬೆಂಕಿ- ವಿಡಿಯೋ ನೋಡಿ

ಚೆನ್ನೈ: ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿ ಸ್ಟಾರ್ಟ್ ಮಾಡಿದಾಗ ಬೈಕಿಗೆ ಬೆಂಕಿ ತಗಲಿದ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.

ಸವಾರರೊಬ್ಬರು ಪೆಟ್ರೋಲ್ ಹಾಕಿಸಲೂ ಬಂಕ್‍ಗೆ ಬಂದಿದ್ದಾರೆ. ಈ ವೇಳೆ ತನ್ನ ಬೈಕ್ ಮೇಲೆ ಕುಳಿತು ಪೆಟ್ರೋಲ್ ತುಂಬಿಸಿದ್ದ ಬಳಿಕ ಹಣವನ್ನು ಪಾವತಿಸಿ ಬೈಕ್ ಅನ್ನು ಚಾಲನೆ ಮಾಡಿದ್ದಾರೆ. ಚಾಲನೆಯಾದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಲ್ಲೆ ಇದ್ದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಸವಾರನನ್ನು ರಕ್ಷಿಸಿದ್ದಾರೆ. ಬೆಂಕಿ ಹತ್ತಿಕೊಳ್ಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಕಿ ಯಾಕೆ ಹೊತ್ತಿಕೊಳ್ಳುತ್ತೆ?
ಪೆಟ್ರೋಲ್ ಬಂಕ್ ನಲ್ಲಿ ಬೈಕಿಗೆ ಬೆಂಕಿ ಹೊತ್ತಿಕೊಳ್ಳುವುದು ಹೊಸದೆನಲ್ಲ. ಈ ಹಿಂದೆಯೂ ನಡೆದಿದೆ. ಸಾಧಾರಣವಾಗಿ ದೂರ ಪ್ರಯಾಣ ಮಾಡಿ ಸವಾರರು ಪೆಟ್ರೋಲ್ ತುಂಬಿಸಲು ಬಂಕ್ ಗೆ ಬರುತ್ತಾರೆ. ಈ ವೇಳೆ ಟ್ಯಾಂಕ್ ಫುಲ್ ಮಾಡಲು ಹೇಳುತ್ತಾರೆ. ಟ್ಯಾಂಕ್ ಫುಲ್ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಭರ್ತಿಯಾಗಿ ಪೆಟ್ರೋಲ್ ಹರಿಯುತ್ತದೆ. ಟ್ಯಾಂಕ್ ನಿಂದ ಹರಿದ ಪೆಟ್ರೋಲ್ ಎಂಜಿನ್‍ಗೆ ಬರುತ್ತದೆ. ಬಹಳ ದೂರವನ್ನು ಕ್ರಮಿಸಿದ್ದರಿಂದ ಎಂಜಿನ್ ಮೊದಲೇ ಬಿಸಿಯಾಗಿರುತ್ತದೆ. ಈ ಸಂದರ್ಭದಲ್ಲಿ ಎಂಜಿನ್ ಮೇಲೆ ಪೆಟ್ರೋಲ್ ಬಿದ್ದಾಗ ಗಾಡಿ ಚಾಲನೆಯಾದಾಗ ಬೆಂಕಿ ಹೊತ್ತಿಕೊಳ್ಳುತ್ತದೆ.

ಕೆಲವೊಮ್ಮೆ ಮೊಬೈಲ್ ಬಳಸಿದರೂ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊಬೈಲ್ ಫೋನ್‍ನಿಂದ ಕಾಂತೀಯ ತರಂಗಗಳು ಸೃಷ್ಟಿಯಾಗುತ್ತವೆ. ಈ ತರಂಗಗಳು ಪೆಟ್ರೋಲ್ ಹೊತ್ತಿ ಉರಿಯಲು ಪ್ರಚೋದಿಸುತ್ತದೆ. ಹೀಗಾಗಿ ಬಂಕ್ ಬಳಿ ಮೊಬೈಲ್ ಬಳಕೆ, ಸಿಗರೇಟ್ ಸೇದುವುದನ್ನು ನಿಷೇಧಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=rPWgDQc3ydE

Comments

Leave a Reply

Your email address will not be published. Required fields are marked *