ಬಿಎಸ್‍ವೈ ಆಯ್ತು ಈಗ ಸಿದ್ದರಾಮಯ್ಯ ಪರ ಕರಂದ್ಲಾಜೆ ಬ್ಯಾಟಿಂಗ್!

ಉಡುಪಿ: ಚುನಾವಣೆಯ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ಅವರ ಪರ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಕುರುಬರ ಮತಕ್ಕೆ ಸಿದ್ದರಾಮಯ್ಯ ಬೇಕಿತ್ತು. ಆದರೆ ಈಗ ಸಿದ್ದರಾಮಯ್ಯ ಜೆಡಿಎಸ್ ಗೂ ಬೇಡ, ಕಾಂಗ್ರೆಸ್ ಹೈಕಮಾಂಡಿಗೆ ಬೇಡವಾಗಿದ್ದಾರೆ. ಕಾಂಗ್ರೆಸ್ ಗೆ ದುಡ್ಡು ಕೊಡುವ ಮಂತ್ರಿಗಳು ಬೇಕಾಗಿದ್ದಾರೆ. ಸಿದ್ದರಾಮಯ್ಯ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ 78 ಸೀಟು ಪಡೆಯೋದಕ್ಕೆ ಸಿದ್ದರಾಮಯ್ಯ ಕಾರಣ. ಚುನಾವಣೆಯ ಸಂದರ್ಭದಲ್ಲಿ ಸೋನಿಯಾ, ರಾಹುಲ್ ಸಿದ್ದರಾಮಯ್ಯನವರನ್ನು ತಲೆಮೇಲೆ ಹೊತ್ತು ತಿರುಗಿದ್ದರು. ಆದರೆ ಈಗ ಸಿದ್ದರಾಮಯ್ಯ ಬೇಡವೆಂದು ದೊಪ್ಪನೆ ಕೆಳಗೆ ಹಾಕಿದ್ದಾರೆ. ಕಾಂಗ್ರೆಸ್‍ನ ಯೂಸ್ ಆಂಡ್ ಥ್ರೋ ಮನೋಸ್ಥಿತಿಯನ್ನು ಸಿದ್ದರಾಮಯ್ಯ ಈಗಲಾದರೂ ಅರಿತುಕೊಳ್ಳಲಿ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಇದನ್ನೂ ಓದಿ:ಕಲಾಪದಲ್ಲಿ ಡಿಕೆಶಿಯನ್ನು ಹಾಡಿ ಹೊಗಳಿದ ಬಿಎಸ್‍ವೈ! ವಿಡಿಯೋ ನೋಡಿ

ಜೆಡಿಎಸ್- ಕಾಂಗ್ರೆಸ್ ಸರ್ಕಾರಕ್ಕೆ ಎರಡೆರಡು ಹೈಕಮಾಂಡ್. ಒಂದು ಹೈಕಮಾಂಡ್ ಪದ್ಮನಾಭ ನಗರದಲ್ಲಿ ಇನ್ನೊಂದು ಹೈಕಮಾಂಡ್ ದೆಹಲಿಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಪರ ಮೃದು ಧೋರಣೆ ಪ್ರದರ್ಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಎಚ್‍ಡಿಕೆ ಕುಮಾರಸ್ವಾಮಿ ಅವರಿಗೆ ಗುರುವಾರ ಟಾಂಗ್ ಕೊಟ್ಟಿದ್ದರು. ಸಿಎಂ ಪದವಿ ಸಿಗುವುದಕ್ಕೆ ಕಾರಣಕರ್ತರಾದ ಸಿದ್ದರಾಮಯ್ಯರನ್ನು ಎಚ್‍ಡಿಕೆ ಕಡೆಗಣಿಸಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಸಿದ್ದರಾಮಯ್ಯರನ್ನು ಸರಿಯಾಗಿ ಮಾತನಾಡಿಸಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಬಿಎಸ್ ಯಡಿಯೂರಪ್ಪ ಹೇಳಿದ್ದರು.

Comments

Leave a Reply

Your email address will not be published. Required fields are marked *