ಕೆಜಿಗಟ್ಟಲೆ ದ್ರಾಕ್ಷಿ ತಿನ್ನುತ್ತಿದ್ದೆ, ರೈತರ ರಾಸಾಯನಿಕಗಳಿಂದ ಬಿಟ್ಟೆ: ಶೋಭಾ ಕರಂದ್ಲಾಜೆ

ಕೋಲಾರ: ಈ ಹಿಂದೆ ದಿನಕ್ಕೆ ಕೆಜಿ ಗಟ್ಟಲೆ ದ್ರಾಕ್ಷಿ ತಿನ್ನುತ್ತಿದ್ದೇನು. ಆದರೆ ರೈತರು ರಾಸಾಯನಿಕ ಬಳಕೆ ಮಾಡುವುದನ್ನು ನೋಡಿ ಬಿಟ್ಟೆ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೋಲಾರದಲ್ಲಿಂದು ಪ್ರವಾಸ ಕೈಗೊಂಡಿದ್ದ ಶೋಭಾ ಕರಂದ್ಲಾಜೆ ರೈತರ ತೋಟಗಳಿಗೆ ಭೇಟಿ ನೀಡಿ ನೂತನ ಕೆವಿಕೆ ಕಟ್ಟಡವನ್ನ ಉದ್ಘಾಟನೆ ಮಾಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಹಣ್ಣು ತರಕಾರಿಗಳನ್ನ ಬೆಳೆಯುವ ವೇಳೆ ಹೆಚ್ಚೆಚ್ಚು ರಸ ಗೊಬ್ಬರಗಳನ್ನ ಬಳಕೆ ಮಾಡುತ್ತಾರೆ. ಪರಿಣಾಮ ಈ ಹಿಂದೆ ದ್ರಾಕ್ಷಿಯನ್ನ ಹೆಚ್ಚಾಗಿ ಬೆಳೆಯುವ ದೊಡ್ಡಬಳ್ಳಾಪುರದ ರೈತರ ತೋಟಕ್ಕೆ ಭೇಟಿ ನೀಡದ್ದ ವೇಳೆ ಅಲ್ಲಿ ದ್ರಾಕ್ಷಿಯನ್ನ ಗಿಡದಿಂದ ಕೆಳಗಿಳಿಸಿ ರಾಸಾಯನಿಕ ಮಿಶ್ರಣ ಮಾಡುತ್ತಿದ್ದನ್ನ ಕಣ್ಣಾರೆ ಕಂಡೆ. ಅಂದಿನಿಂದ ಅತ್ಯಂತ ಇಷ್ಟವಾದ ದ್ರಾಕ್ಷಿಯನ್ನೆ ತಿನ್ನುವುದನ್ನ ಬಿಟ್ಟಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬಡ್ಡಿ ಹಣ ವಸೂಲಿಗೆ ಬಂದು ತೆಗೆದುಕೊಂಡು ಹೋದ ಬೈಕ್ ತರಲು ಹೋಗಿ ಕೊಲೆಯಾದ್ರು!

ತಮ್ಮ ದ್ರಾಕ್ಷಿ ಪ್ರೀತಿ ಹಾಗೂ ರೈತರು ಮಾಡುವ ರಾಸಾಯನಿಕ ಮಿಶ್ರಣವನ್ನ ವಿವರಿಸಿದ್ರು. ಅಲ್ಲದೆ ಇದೆ ವೇಳೆ ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗಬೇಕಾದರೆ ಹೆಚ್ಚೆಚ್ಚು ರಫ್ತಾಗಬೇಕಾದರೆ ಗುಣಮಟ್ಟ ಹಾಗೂ ರಾಸಾಯನಿಕ ಬಳಕೆ ಕಡಿಮೆ ಇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕೋಮುದ್ವೇಷಕ್ಕೆ ಸಂಚು ರೂಪಿಸಿದ್ದ ಲೋಕಂಡ್ವಾಲಾ ಗ್ಯಾಂಗ್ ಅಂದರ್

Comments

Leave a Reply

Your email address will not be published. Required fields are marked *